ಹಾಟ್‍ಟಬ್‍ನಲ್ಲಿ ನಟ ಶವವಾಗಿ ಪತ್ತೆ

Public TV
1 Min Read

ಲಾಸ್ ಏಂಜಲೀಸ್: ಫ್ರೆಂಡ್ಸ್ ನಟ ಮ್ಯಾಥ್ಯೂ ಪೆರ್ರಿ (54) (Matthew Perry) ತನ್ನ ನಿವಾಸದಲ್ಲಿರುವ ಹಾಟ್‍ಟಬ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಲಾಸ್ ಏಂಜಲೀಸ್ ಫೆಸಿಫಿಕ್ ಪಾಲಿಸೇಡ್ಸ್ ಮನೆಯ ಹಾಟ್ ಟಬ್‍ನಲ್ಲಿ (Hot Tub) ಪೆರ್ರಿಯವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಇದರಿಂದ ಗಾಬರಿಗೊಂಡು ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಪೊಲೀಸರಿಗೆ ಸಂಜೆ 4 ಗಂಟೆ ಸುಮಾರಿಗೆ 911 ಕರೆ ಬಂದಿತು. ಮೇಲ್ನೋಟಕ್ಕೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವಂತೆ ಕಂಡುಬಂದಿದೆ. ಸ್ಥಳದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯೋತ್ಸವಕ್ಕೆ ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವು

ಪೆರ್ರಿಯವರು ಕೆನಡಾದ ಒಟ್ಟಾವಾದಲ್ಲಿ ಬಾಲ್ಯವನ್ನು ಕಳೆದಿದ್ದಾರೆ. ಬಳಿಕ ಕೆನಡಾದ ಜೂನಿಯರ್ಸ್‍ನಲ್ಲಿ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರನಾಗಿ ಉತ್ತಮ ಕೆರಿಯರ್ ಹೊಂದಿದ್ದರು. ಆದರೆ ನಟನೆಗಾಗಿ ತಮ್ಮ 15ನೇ ವಯಸ್ಸಿನಲ್ಲಿ ಟೆನಿಸ್ ಬಿಟ್ಟರು. 24 ನೇ ವಯಸ್ಸಿನಲ್ಲಿ ಫ್ರೆಂಡ್ಸ್ ತಂಡಕ್ಕೆ ಸೇರಿದ್ದರು. ಬಳಿಕ ಕಲವಾರು ಶೋಗಳಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ಮನೆಮಾತಾಗಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್