ಗುದದ್ವಾರಕ್ಕೆ ಏರ್ ಪಂಪ್ ಹೊಡೆದ ಸ್ನೇಹಿತರ ಕೃತ್ಯಕ್ಕೆ ಒಬ್ಬ ಪ್ರಾಣ ಬಿಟ್ಟ

Public TV
1 Min Read

ಕೋಲ್ಕತ್ತಾ: ಸ್ನೇಹಿತ ತಮಾಷೆ ಮಾಡುತ್ತಾ ಗುದದ್ವಾರಕ್ಕೆ ಏರ್ ಪಂಪ್ ಹೊಡೆದಿದ್ದಾನೆ. ಈ ಪರಿಣಾಮವಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ನವೆಂಬರ್ 16ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರೆಹಮತ್ ಅಲಿ ಮೃತನಾಗಿದ್ದಾನೆ. ಈತ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದನು. ರಾತ್ರಿ ಪಾಳಿಯಲ್ಲಿದ್ದ ವೇಳೆ ತಮಾಷೆ ಮಾಡುತ್ತಾ ಸಹೋದ್ಯೊಗಿಗಳು ಆತನನ್ನು ಹಿಡಿದು ಗುದದ್ವಾರಕ್ಕೆ ಪೈಪ್ ಅಳವಡಿಸಿ ದೇಹಕ್ಕೆ ಗಾಳಿಯನ್ನು ಪಂಪ್ ಮಾಡಿದ್ದಾರೆ. ರೆಹಮತ್ ಅಲಿ ಇದನ್ನು ವಿರೋಧಿಸಿದರೂ, ಅವನ ಸಹೋದ್ಯೋಗಿಗಳು ಈ ರೀತಿ ಮಾಡುವುದನ್ನು ನಿಲ್ಲಿಸಲಿಲ್ಲ. ಹೀಗೆ ಪಂಪ್ ಮಾಡುತ್ತಿದ್ದಂತೆ ರೆಹಮತ್ ಅಲಿ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿದೆ. ರೆಹಮತ್ ಅಲಿ ಅನಾರೋಗ್ಯಕ್ಕೀಡಾಗುತ್ತಿದ್ದಂತೆಯೇ ಹೆದರಿದ ಸಹೋದ್ಯೋಗಿಗಳು ಅವರನ್ನು ಹತ್ತಿರದ ಹೂಗ್ಲಿಯ ಚುಂಚೂರ ಇಮಾಂಬರಾ ಆಸ್ಪತ್ರೆಗೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್

ಚಿಕಿತ್ಸೆ ಪಡೆಯುತ್ತಿದ್ದ ರೆಹಮತ್ ಅಲಿ 10 ದಿನಗಳ ನಂತರ ಸಾವನ್ನಪ್ಪಿದ್ದಾನೆ. ಗಾಳಿಯ ಒತ್ತಡದಿಂದಾಗಿ ರೆಹಮತ್ ಅವರ ಲಿವರ್ ಸಂಪೂರ್ಣ ಹಾಳಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ರೆಹಮತ್ ಅಲಿ ಕುಟುಂಬಸ್ಥರು ಭದ್ರೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೆಹಮತ್ ಅಲಿ ಸಹೋದ್ಯೋಗಿ ಶಹಜಾದಾ ಖಾನ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಗಿರಣಿಯಲ್ಲಿ ಸೆಣಬನ್ನು ಏರ್ ಪಂಪ್ ಮೂಲಕ ಸ್ವಚ್ಛಗೊಳಿಸುವ ಜವಾಬ್ದಾರಿ ಶಹಜಾದಾ ಕೆಲಸವಾಗಿತ್ತು. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!

Share This Article
Leave a Comment

Leave a Reply

Your email address will not be published. Required fields are marked *