ಹಮಾಸ್‌ ಉಗ್ರರ ಒಂದು ಮುಖದ ಎರಡು ಅನುಭವ – ಕರಾಳ ನೆನಪು ಬಿಚ್ಚಿಟ್ಟ ಮಹಿಳೆ

Public TV
3 Min Read

ಟೆಲ್‌ ಅವೀವ್‌: ಇತ್ತೀಚೆಗಷ್ಟೇ ಅಮೆರಿಕದ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದ ಹಮಾಸ್‌ ಉಗ್ರರ ಗುಂಪು (Hamas Terrorists), ಗಾಜಾಪಟ್ಟಿಯಲ್ಲಿ ಮತ್ತಿಬ್ಬರು ವೃದ್ಧ ಒತ್ತೆಯಾಳುಗಳನ್ನು (Israel Hostage) ಮಾನವೀಯ ಕಾರಣಗಳಿಂದಾಗಿ ಬಿಡುಗಡೆ ಮಾಡಿದೆ. ಅವರನ್ನು ನೂರಿಟ್ ಕೂಪರ್ (79) ಹಾಗೂ ಯೋಚೆವೆಡ್ ಲಿಫ್‌ಶಿಟ್ಜ್ (85) ಎಂದು ಗುರುತಿಸಲಾಗಿದೆ.

ಬಿಡುಗಡೆಗೊಂಡ ಬಳಿಕ ಮಾತನಾಡಿರುವ ಯೋಚೆವೆಡ್ ಲಿಫ್‌ಶಿಟ್ಜ್, ಅಕ್ಟೋಬರ್‌ 7 ರಂದು ದಾಳಿ ನಡೆಸಿ ನಮ್ಮನ್ನು ಗಾಜಾಕ್ಕೆ ಕರೆದೊಯ್ಯುವಾಗ ಹಮಾಸ್‌ ಭಯೋತ್ಪಾದಕರು ನನ್ನನ್ನ ಥಳಿಸಿದ್ದರು. ಆದ್ರೆ ಪ್ಯಾಲೆಸ್ತೀನ್‌ ಎನ್‌ಕ್ಲೇವ್‌ನಲ್ಲಿ (Palestinian Enclave) ಸೆರೆಯಲ್ಲಿದ್ದಾಗ ಅವರೇ ನಮಗೆ ಚಿಕಿತ್ಸೆ ಕೊಡಿಸಿದರು. ಸುರಂಗದಲ್ಲಿ ಇರಿಸಿದ್ದರೂ ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡರು ಎಂದು ಹೇಳಿದ್ದಾರೆ.

ನಮ್ಮನ್ನು ಕೂಡಿಹಾಕಿದ್ದ ಸುರಂಗಗಳಿಗೇ ವೈದ್ಯರನ್ನು ಕರೆದುಕೊಂಡು ಬಂದಿದ್ದರು. ಮೂಲ ಸೌಕರ್ಯ ಕಲ್ಪಿಸಿದ್ದರು, ನಮ್ಮನ್ನು ಮೃದುವಾಗಿ ನಡೆಸಿಕೊಂಡು ಎಲ್ಲಾ ಅಗತ್ಯತೆಗಳನ್ನೂ ಪೂರೈಸಿದರು. ಆದ್ರೆ ಯುದ್ಧದಿಂದ ನಾವು ನರಕ ಅನುಭವಿಸುತ್ತೇವೆ. ಈ ಪರಿಸ್ಥಿತಿಗೆ ಬರುತ್ತೇವೆ ಎಂದು ಊಹಿಸಿರಲೂ ಇಲ್ಲ ಎಂದು ಭಾವುಕರಾಗಿದ್ದಾರೆ.

ಅದಕ್ಕೂ ಮುನ್ನ ನಮ್ಮನ್ನ ಗಾಜಾದಿಂದ ಕರೆದೊಯ್ಯುತ್ತಿದ್ದಾಗ ಬೈಕ್‌ನಲ್ಲಿ ಹಾಕಿಕೊಂಡು ಹೋಗ್ತಿದ್ರು. ಆಗ ನನ್ನ ತಲೆ ಒಂದು ಕಡೆಯಿದ್ದರೆ, ದೇಹದ ಉಳಿದ ಭಾಗ ಇನ್ನೊಂದು ಬದಿಯಲ್ಲಿತ್ತು. ದಾರಿಯುದ್ಧಕ್ಕೂ ನನ್ನಗೆ ಹೊಡೆಯುತ್ತಲೇ ಕರೆದುಕೊಂಡು ಹೋದರು. ಆ ಏಟಿನಿಂದ ನನಗೆ ಉಸಿರಾಡುವುದೂ ಕಷ್ಟವಾಗಿತ್ತು ಎಂದು ಕಹಿ ಅನುಭವ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್ ಮಹಾಯುದ್ಧ – 30 ಪ್ಯಾಲೆಸ್ತೀನಿಯರು ಸಾವು

ಮಾಹಿತಿ ನೀಡಿ: ಇನ್ನೂ ಹಮಾಸ್‌ ಉಗ್ರರಿಂದ ಒತ್ತೆಯಾಳುಗಳನ್ನು ರಕ್ಷಿಸಲು ಪಣ ತೊಟ್ಟಿರುವ ಇಸ್ರೇಲ್ ರಕ್ಷಣಾ ಪಡೆಗಳು, ಹಮಾಸ್ ಗುಂಪು ಇಸ್ರೇಲಿ ಒತ್ತೆಯಾಳುಗಳನ್ನು ಇರಿಸಿರುವ ಸ್ಥಳಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮನವಿ ಮಾಡಿದೆ. ಅದಕ್ಕಾಗಿ ಪ್ರತ್ಯೇಕ ಸಹಾಯವಾಣಿ ನೀಡಿದ್ದು, ಸೂಕ್ತ ಮಾಹಿತಿ ನೀಡಿದಲ್ಲಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಜೊತೆಗೆ ಮಾಹಿತಿ ನೀಡಿದವರ ಗೌಪ್ಯತೆ ಕಾಪಾಡುವುದಾಗಿ ಭರವಸೆ ನೀಡಿದೆ.

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಹಾಗೂ ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ಮಾಡುತ್ತಿರುವ ಸತತ ದಾಳಿಯಿಂದಾಗಿ ಇದುವರೆಗೆ 6,400 ಜನ ಮೃತಪಟ್ಟಿದ್ದಾರೆ. ಇಸ್ರೇಲ್‌ ಮೇಲೆ ಹಮಾಸ್‌ ಮಾಡಿದ ದಾಳಿಯಿಂದ ಇದುವರೆಗೆ ಇಸ್ರೇಲ್‌ನಲ್ಲಿ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್‌ ಸತತ ದಾಳಿಗೆ 5,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗಾಜಾ ಪಟ್ಟಿಯಲ್ಲಂತೂ ಸಾವಿರಾರು ಜನ ಗಾಯಗೊಂಡಿದ್ದು, ಲಕ್ಷಾಂತರ ನಾಗರಿಕರು ನಿರಾಶ್ರಿತರಾಗಿದ್ದಾರೆ. ಗಾಜಾ ಗಡಿಯಲ್ಲಿ ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳನ್ನ ನಿಯೋಜಿಸಿ ಪೂರ್ಣ ಪ್ರಮಾಣದ ದಾಳಿ ನಡೆಸಲು ಇಸ್ರೇಲ್‌ ಸಜ್ಜಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಇಸ್ರೇಲ್‌ ಸೈನಿಕರು ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಬಹುದು. ಇದರ ಭೀತಿಯಿಂದಾಗಿಯೇ ಹಮಾಸ್‌ ಉಗ್ರರು ಇಸ್ರೇಲ್‌ನ ಇಬ್ಬರು ಒತ್ತೆಯಾಳುಗಳನ್ನು ಸೋಮವಾರ ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ. ಇಷ್ಟಾದರೂ ಕೆಲವು ಉಗ್ರರು ರಕ್ಕಸ ಕೃತ್ಯಗಳ ಮೂಲಕ ನಾಗರಿಕರಿಗೆ ತೊಂದರೆ ಕೊಡುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್