ಪ್ಲಾಸಿಕ್ ಬಾಟಲಿ ಕೊಟ್ಟರೆ ಬಸ್‌ನಲ್ಲಿ ಉಚಿತ ಪ್ರಯಾಣ!

Public TV
2 Min Read

ಅಬುಧಾಬಿ: ಪ್ಲಾಸ್ಟಿಕ್ ಇಂದು ಪ್ರತಿ ಹಂತದಲ್ಲಿ ನಾವು ಬಳಸುವ ವಸ್ತುವಿನಲ್ಲಿ ಸಿಗುತ್ತಿದೆ. ಕುಡಿಯುವ ನೀರಿನಿಂದ ಮಲಗುವ ಹಾಸಿಗೆವರೆಗೂ ಬಳಸುವ ವಸ್ತುಗಳಲ್ಲಿ ಪ್ಲಾಸ್ಟಿಕ್ ಅಂಶ ಇಲ್ಲದೇ ಬಳಸಲಾಗುವುದೇ ಇಲ್ಲ ಎನ್ನುವಂತಾಗಿದೆ. ಪ್ಲಾಸ್ಟಿಕ್‌ನಿಂದ ಎಷ್ಟೋ ಪ್ರಾಣಿ ಸಂಕುಲ ಅಳಿಯುತ್ತಿವೆ. ಮಾಲಿನ್ಯದಿಂದ ಪರಿಸರವೂ ಹಾಳಾಗುತ್ತಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನೀಡಿದೆರೆ ಸಾರ್ವಜನಿಕ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಒಂದು ಅವಕಾಶವನ್ನು ಅಬುಧಾಮಿ ಮುನ್ಸಿಪಾಲಿಟಿ ಹಾಗೂ ಸಾರಿಗೆ ಇಲಾಖೆಯ ಸಮಗ್ರ ಸಾರಿಗೆ ಕೇಂದ್ರಗಳು ಕಲ್ಪಿಸಿಕೊಟ್ಟಿವೆ. ಪರಿಸರ ಸಂಸ್ಥೆ ಅಬುಧಾಬಿ (ಇಎಡಿ), ಅಬುಧಾಬಿ ತ್ಯಾಜ್ಯ ನಿರ್ವಹಣಾ ಕೇಂದ್ರ (ತದ್ವೀರ್) ಮತ್ತು ಡಿ ಗ್ರೇಡ್ ಸಹಯೋಗದಲ್ಲಿ ಈ ಅಭಿಯಾನ ಶುರುವಾಗಿದೆ. ಬಿಸಾಡುವ ಪ್ರತಿ ಬಾಟಲ್ ಅನ್ನು ಉಚಿತ ಪ್ರಯಾಣಕ್ಕೆ ಬಳಸಬಹುದಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ -ಬಜೆಟ್‍ನಲ್ಲಿ ರಾಜ್ಯಕ್ಕೆ 832 ಕೋಟಿ ಮೀಸಲು

PLASTIC DEPOSAL

ನೀರು, ತಂಪು ಪಾನೀಯ ಅಥವಾ ಯಾವುದೇ ದ್ರವ್ಯ ಸೇವಿಸಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಅಲ್ಲಲ್ಲೇ ಬಿಸಾಡುವುದು ಸಾಮಾನ್ಯವಾಗಿಬಿಟ್ಟಿದೆ. ಒಮ್ಮೆ ಕಸದ ತೊಟ್ಟಿಗೂ ಹಾಕಿದರೂ ಕೂಡ ಅದು ಸಂಸ್ಕರಣೆಗೊಳ್ಳುವುದಿಲ್ಲ. ಎಲ್ಲೆಂದರಲ್ಲಿ ಈ ಪ್ಲಾಸ್ಟಿಕ್ ಬಿಸಾಡಿ ಉಂಟಾಗುವ ಮಾಲಿನ್ಯ ತಪ್ಪಿಸಬೇಕು ಹಾಗೂ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗಬೇಕು ಎಂಬ ಉದ್ದೇಶದಿಂದ ಅಬುಧಾಬಿ ಸರ್ಕಾರ ಹೀಗೊಂದು ಆಫರ್ ನೀಡಿದೆ. ‌

ಏನು ಮಾಡಬೇಕು?
ಅಬುಧಾಬಿ ಡಿಎಂಟಿ ಈ ಪ್ಲಾಸ್ಟಿಕ್ ನಿಯಂತ್ರಣ ಅಭಿಯಾನಕ್ಕೆ ಪಾಯಿಂಟ್ಸ್ ಫಾರ್ ಪ್ಲಾಸಿಕ್; ದಿ ಬಸ್ ಟ್ರಿಪ್ ಎಂದು ಹೆಸರಿಟ್ಟಿದೆ. ಅದರ ಅಡಿಯಲ್ಲಿ ಅಬುಧಾಬಿಯ ಮುಖ್ಯ ಬಸ್ ನಿಲ್ದಾಣದಲ್ಲಿ ಒಂದು ಪ್ಲಾಸ್ಟಿಕ್ ಡೆಪಾಸಿಟ್ (ಪ್ಲಾಸ್ಟಿಕ್ ಬಾಟಲಿಯ ಠೇವಣಿ ಇಡುವ) ಮಶಿನ್ ಅನ್ನು ಅಳವಡಿಸಲಾಗಿದೆ. ಯಾವುದೇ ಪ್ರಯಾಣಿಕ ಖಾಲಿ ಪ್ಲಾಸ್ಟಿಕ್ ಬಾಟಲಿಯನ್ನು ಅದರಲ್ಲಿ ಹಾಕಿದರೆ, ಬಾಟಲಿಗೆ ಇಂತಿಷ್ಟು ಪಾಯಿಂಟ್ಸ್ ಸಿಗುತ್ತದೆ. ಈ ಪಾಯಿಂಟ್ಸ್‌ಗಳನ್ನು ಪಾಯಿಂಟ್‌ಗಳನ್ನು ಬಸ್ ಪ್ರಯಾಣ ದರಕ್ಕೆ ಅನ್ವಯ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಬೀದರ್‌ನ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆ 

PLASTIC

ಹೀಗಿರಿಲಿದೆ ಪ್ರಕ್ರಿಯೆ…
600 ಎಂಎಲ್ ಅಥವಾ ಅದಕ್ಕೂ ಕಡಿಮೆ ಅಳತೆಯ ಪ್ರತಿ ಬಾಟಲಿಗೂ ಒಂದೊಂದು ಪಾಯಿಂಟ್ ಇರುತ್ತದೆ. 600 ಎಂಎಲ್ ಮತ್ತು ಅದಕ್ಕೂ ದೊಡ್ಡದಾದ ಪ್ರತಿ ಬಾಟಲಿಗಳಿಗೆ 2 ಪಾಯಿಂಟ್ ಸಿಗಲಿದೆ. ಪ್ಲಾಸ್ಟಿಕ್ ಬಾಟಲಿಯಿಂದ ಗಳಿಸಿದ ಒಂದು ಪಾಯಿಂಟ್ 10 ಫಿಲ್ಸ್‌ಗಳಿಗೆ ಸಮ (ಫಿಲ್ಸ್ ಎಂದರೆ ಕರೆನ್ಸಿಯ ಘಟಕ)ವಾಗಲಿದೆ. 10 ಪಾಯಿಂಟ್‌ಗಳು 1 ದಿರ್ಹಾಮ್‌ಗೆ ಸರಿಸಮ (ದಿರ್ಹಾಮ್ ಎಂದರೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಕರೆನ್ಸಿ). ಈ ಲೆಕ್ಕಾಚಾರದಲ್ಲಿ ಬಸ್ ದರವನ್ನು ಪರಿಗಣಿಸಿ, ಎಷ್ಟು ಹಣ ಆಗುತ್ತದೆಯೋ ಅಷ್ಟು ದೂರ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *