ಫ್ರೀ ಪ್ಯಾಲೆಸ್ತೀನ್‌ ಎಂದು ಕೂಗುತ್ತಾ ಬೆಂಕಿ ಹಚ್ಚಿಕೊಂಡ ಸೈನಿಕ

Public TV
1 Min Read

ವಾಷಿಂಗ್ಟನ್‌: ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಿದ ಸೈನಿಕನೊಬ್ಬ ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.

‘ಫ್ರೀ ಪ್ಯಾಲೆಸ್ತೀನ್’‌ (ಪ್ಯಾಲೆಸ್ತೀನ್‌ ಸ್ವತಂತ್ರ್ಯಗೊಳಿಸಿ) ಎಂದು ಘೋಷಣೆ ಕೂಗುತ್ತ ಯುಎಸ್‌ ಏರ್‌ಮ್ಯಾನ್‌ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಾಯುಪಡೆ ತಿಳಿಸಿದೆ.

ಆಘಾತಕಾರಿ ಘಟನೆಯು ಗಾಜಾದಲ್ಲಿ ಇಸ್ರೇಲ್‌ನ ಕ್ರಮಗಳ ವಿರುದ್ಧ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿದೆ. ಅಲ್ಲಿ ಯುಎಸ್ ಬೆಂಬಲದೊಂದಿಗೆ ಹಮಾಸ್ ಉಗ್ರಗಾಮಿಗಳು ಅಕ್ಟೋಬರ್ 7 ರಂದು ನಡೆಸಿದ ದಾಳಿಗೆ ಪ್ರತೀಕಾರದ ಯುದ್ಧವನ್ನು ನಡೆಸುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದೃಶ್ಯಗಳಲ್ಲಿ, ಹೆಸರು ಹೇಳಲಿಚ್ಛಿಸದ ವ್ಯಕ್ತಿ ತನ್ನ ಮೇಲೆಯೇ ಬೆಂಕಿ ಹಚ್ಚಿಕೊಂಡಾಗ “ಫ್ರೀ ಪ್ಯಾಲೆಸ್ತೀನ್” ಎಂದು ಕೂಗಿದ್ದಾನೆ. ಈ ಘಟನೆ ವೇಳೆ ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ ಎಂದು ಇಸ್ರೇಲಿ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

Share This Article