ಮಂಜುನಾಥಸ್ವಾಮಿಗೆ ಬೆದರಿಕೆ – ತುಮಕೂರಿನಲ್ಲಿ ಯೂಟ್ಯೂಬರ್‌ ಅರೆಸ್ಟ್‌

By
1 Min Read

ತುಮಕೂರು: ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ಮಠದ ಬಾಲ ಮಂಜುನಾಥಸ್ವಾಮಿಗೆ ಬೆದರಿಕೆ ಹಾಕಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟ ಆರೋಪದಲ್ಲಿ ತುಮಕೂರಿನ ಯೂಟ್ಯೂಬರ್‌ (Youtuber) ಸುಧೀಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸುಧೀಂದ್ರ ಜನವರಿ 21 ರಿಂದಲೂ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಜೂನ್ 28ರಂದು ಮಠದ ಸಿಬ್ಬಂದಿ ಅಭಿಲಾಷ್, ಸುರೇಶ್ ಮತ್ತು ಭಕ್ತರಾದ ಬೀಚನಹಳ್ಳಿ ಕರಿಗೌಡ ಅವರನ್ನು ಸಂಪರ್ಕಿಸಿ ಮಠಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಹೊಂದಿದ್ದು, ಅವುಗಳನ್ನು ಪ್ರಕಟಿಸಿದರೆ ಮಠದ ಹೆಸರು ಹಾಳಾಗುತ್ತದೆ. ಇದನ್ನು ಪ್ರಸಾರ ಮಾಡದಿರಲು 25 ಲಕ್ಷ ರೂ. ನೀಡಿ ಎಂದು ಬೆದರಿಕೆ ಹಾಕಿದ್ದ ಎಂದು ಸ್ವಾಮೀಜಿ ದೂರಿದ್ದಾರೆ. ಇದನ್ನೂ ಓದಿ: ಸೆ.3-4ಕ್ಕೆ ಜಿಎಸ್‌ಟಿ ಕೌನ್ಸಿಲ್ ಸಭೆ; ಮೋದಿಯ ದೀಪಾವಳಿ ಗಿಫ್ಟ್ ಘೋಷಣೆಯ ಬಗ್ಗೆ ಸಭೆಯಲ್ಲಿ ಅಂತಿಮ ನಿರ್ಧಾರ

ಹಣ ನೀಡದ ಕಾರಣ ಜುಲೈ 10ರಂದು ಸುಧೀಂದ್ರ ತನ್ನ ಯೂಟೂಬ್ ಚಾನಲ್‌ನಲ್ಲಿ ಪುಣ್ಯ ಕ್ಷೇತ್ರ- ಕ್ಷೇತ್ರ ಪಾಪಿ ಬಾಲ ಮೌಡ್ಯ ಲೀಲೆ- ಭಾಗ-1 ನಂತರ 17ರಂದು ಭಾಗ- 2 ಪ್ರಸಾರ ಮಾಡಿದ್ದಾನೆ. ಇವೆಲ್ಲವೂ ಕಲ್ಪಿತ ಮತ್ತು ಆಧಾರ ರಹಿತ ಆರೋಪ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಲಮಂಜುನಾಥ ಸ್ವಾಮೀಜಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ವತಃ ದೇವರೇ ಹೇಳಿದ್ರೂ ಮತ್ತೆ ಚುನಾವಣೆಗೆ ನಿಲ್ಲಲ್ಲ: ಕೇಂದ್ರ ಸಚಿವ ವಿ.ಸೋಮಣ್ಣ ರಾಜಕೀಯ ನಿವೃತ್ತಿ ಮಾತು

Share This Article