ಪುರುಷರಿಗೂ ಶಕ್ತಿ ಯೋಜನೆ ಟಿಕೆಟ್ – ಹಣ ಲಪಟಾಯಿಸುತ್ತಿದ್ದ ಐವರು ಕಂಡಕ್ಟರ್ ಸಸ್ಪೆಂಡ್?

1 Min Read

ಬೆಂಗಳೂರು: ಪುರುಷರಿಗೂ ಶಕ್ತಿ ಯೋಜನೆ (Shakti Scheme) ಟಿಕೆಟ್ ನೀಡಿ ಹಣ ಪಡೆದು ಬಿಎಂಟಿಸಿಗೆ (BMTC) ವಂಚಿಸುತ್ತಿದ್ದ ಐವರು ನೌಕರರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

- Advertisement -

ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್‍ಗಳನ್ನು ಬಳಸಿ ನಿಗಮಕ್ಕೆ ಬರಬೇಕಿದ್ದ ಹಣವನ್ನು ಲಪಟಾಯಿಸಿದ ಆರೋಪ ಸಾಬೀತಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಲಕ್ಷಾಂತರ ರೂಪಾಯಿ ವಂಚನೆ ಬಯಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

- Advertisement -

ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಅಲ್ಲದೇ ಅಕೌಂಟ್‍ನಲ್ಲಿಯೂ ಸಾವಿರಾರು ರೂ. ಹಣ ಇರುವುದು ಪತ್ತೆಯಾಗಿದೆ. ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳ ತಪಾಸಣೆ ವೇಳೆ ಕಂಡಕ್ಟರ್‌ಗಳ ವಂಚನೆ ಬಯಲಾಗಿದೆ.

- Advertisement -

- Advertisement -

ಕಂಡಕ್ಟರ್‌ಗಳು ಪೀಕಿರುವ ಹಣ ಎಷ್ಟು?
ಸೂರ್ಯನಾರಾಯಣ – ಡಿಪೋ- 18, ಡ್ರೈವರ್ ಕಂ ಕಂಡಕ್ಟರ್ 6,117 ರೂ.
ಬೊಮ್ಮಲಿಂಗೇಶ್ ಸಿ – ಡಿಪೋ- 18, ಡ್ರೈವರ್ ಕಂ ಕಂಡಕ್ಟರ್: 16,404 ರೂ.
ಬ್ರಿಜೇಶ್ ಬಾಬು- ಡಿಪೋ- 51, ಡ್ರೈವರ್ ಕಂ ಕಂಡಕ್ಟರ್: 9,795 ರೂ.
ಮೋಹನ್- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್: 6,117 ರೂ.
ಎನ್.ಪ್ರಕಾಶ್- ಡಿಪೋ -6- 6,312 ರೂ.
ಒಟ್ಟು 1,82,568 ರೂಪಾಯಿ ಬಿಎಂಟಿಸಿಗೆ ವಂಚನೆ ಮಾಡಲಾಗಿದೆ. ಈ ಹಿಂದೆಯೂ ಇದೇ ವಿಚಾರಕ್ಕೆ ಕೆಲವರನ್ನು ಬಿಎಂಟಿಸಿ ಅಮಾನತು ಮಾಡಿತ್ತು.

Share This Article