ಬಹುಕೋಟಿ ವಂಚನೆ ಪ್ರಕರಣ – ಐಶ್ವರ್ಯಗೌಡಗೆ ಜಾಮೀನು

Public TV
1 Min Read

ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಐಶ್ವರ್ಯಗೌಡಗೆ (Aishwarya Gowda Fraud Case) ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.

ಕಳೆದ 40 ದಿನದ ಹಿಂದೆ ಇಡಿ (Directorate of Enforcement) ಅಧಿಕಾರಿಗಳು ಐಶ್ವರ್ಯ ಮನೆಯ ಮೇಲೆ ದಾಳಿ ಮಾಡಿ, ಐಶ್ವರ್ಯಗೌಡಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸರಿ ಸುಮಾರು 70 ಕೋಟಿ ರೂ. ಹಣದ ವಹಿವಾಟು ಮಾಡಿದ್ದಾರೆ ಎಂದು ಇಡಿ ಆರೋಪಿಸಿತ್ತು. CCH 1 ಇಡಿ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದ ಐಶ್ವರ್ಯಗೆ ಜಾಮೀನು ಮಂಜೂರಾಗಿದೆ. ಇದನ್ನೂ ಓದಿ: ಇಡಿ ತನಿಖೆಗೆ ನನ್ನ ಸಹೋದರ ಡಿ.ಕೆ ಸುರೇಶ್ ಸಹಕಾರ ಕೊಡ್ತಾರೆ: ಡಿಕೆಶಿ

ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯ ಕೆಲವೊಂದು ಷರತ್ತು ವಿಧಿಸಿದೆ. 5 ಲಕ್ಷ ಬಾಂಡ್, ಇಬ್ಬರು ಶ್ಯೂರಿಟಿ ಮತ್ತು ಮನೆಯ ವಿಳಾಸ ಬದಲು ಮಾಡದಂತೆ ಸೂಚನೆ ನೀಡಲಾಗಿದೆ.

ಐಶ್ವರ್ಯಗೌಡ ಪರವಾಗಿ ವಕೀಲ ಎಸ್.ಸುನೀಲ್ ಕುಮಾರ್ ವಾದ ಮಂಡಿಸಿದ್ದರು. ಇದನ್ನೂ ಓದಿ: ಗುರುವಾರ ವಿಚಾರಣೆಗೆ ಇಡಿ ಸಮನ್ಸ್ ಬಂದಿದೆ: ಡಿ.ಕೆ ಸುರೇಶ್

Share This Article