2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ: ಮ್ಯಾಕ್ರನ್

Public TV
1 Min Read

ನವದೆಹಲಿ: 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ ಎಂದು ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ (Emmanuel Macron) ಘೋಷಿಸಿದ್ದಾರೆ.

75ನೇ ಗಣರಾಜ್ಯೋತ್ಸವ ಆಚರಣೆಯ (Republic Day) ಮುಖ್ಯ ಅತಿಥಿಯಾಗಿ ಮ್ಯಾಕ್ರನ್ ಭಾರತಕ್ಕೆ ಆಗಮಿಸಿದ್ದಾರೆ. ಗಣರಾಜ್ಯೋತ್ಸವ ಆಚರಣೆಗೂ ಮುನ್ನ ಶುಕ್ರವಾರ ಬೆಳಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಮ್ಯಾಕ್ರನ್‌ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Republic Day: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ

ಎಕ್ಸ್‌ನಲ್ಲೇನಿದೆ..?: 2030ರ ವೇಳೆಗೆ ಸುಮಾರು 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಲು ಆಹ್ವಾನಿಸುವುದಾಗಿ ನಿರ್ಧರಿಸಿದ್ದೇನೆ. ಇದು ಬಹಳ ಮಹತ್ವಾಕಾಂಕ್ಷೆಯ ಗುರಿಯಾಗಿದೆ, ಆದರೆ ನಾನು ಅದನ್ನು ಮಾಡಲು ತೀರ್ಮಾನಿಸಿರುವುದಾಗಿ ಮ್ಯಾಕ್ರನ್‌ ತಿಳಿಸಿದ್ದಾರೆ.

ಗುರುವಾರ ಭಾರತಕ್ಕೆ ಆಗಮಿಸಿರುವ ಮ್ಯಾಕ್ರನ್‌ ಅವರು ಜೈಪುರಕ್ಕೆ ಆಗಮಿಸಿದ್ದು ಈ ವೇಳೆ ಅವರನ್ನು ನರೇಂದ್ರ ಮೋದಿ (Narendra Modi) ಅವರು ಸ್ವಾಗತಿಸಿದ್ದರು. ಬಳಿಕ ಪ್ರಧಾನಿ ಜೊತೆ ಜೈಪುರದಲ್ಲಿ ಭರ್ಜರಿ ರೋಡ್ ಶೋ ನಲ್ಲಿ ಭಾಗಿಯಾಗಿದ್ದರು. ಗಣರಾಜ್ಯೋತ್ಸವದ ಬಳಿಕ ಅವರು ಫ್ರಾನ್ಸ್‌ ರಾಯಭಾರ ಕಚೇರಿಗೆ ಭೇಟಿ ನೀಡಲಿರುವ ಅವರು, ಅಲ್ಲಿನ ಸಿಬ್ಬಂದಿ ಜೊತೆ ಮಾತುಕತೆ ನಡೆಸಲಿದ್ದಾರೆ. ಸಂಜೆ 7.10ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಬಳಿಕ  ರಾಷ್ಟ್ರಪತಿ ಭವನದಲ್ಲಿ ರಾತ್ರಿ ನಡೆಯುವ ಭೋಜನ ಕೂಟದಲ್ಲಿ  ಭಾಗಿಯಾಗಲಿದ್ದಾರೆ.

Share This Article