ಬೆಂಗಳೂರು ಗ್ರಾಮಾಂತರ: ಇಲ್ಲಿನ ದೇವನಹಳ್ಳಿ ಬಳಿ ನಿರ್ಮಾಣವಾಗಿರುವ ಫಾಕ್ಸ್‌ಕಾನ್ (Foxconn) ಕಂಪನಿಯಿಂದ 30 ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಈ ವಿಚಾರವಾಗಿ ಕೇಂದ್ರ-ರಾಜ್ಯ ಸರ್ಕಾರದ ಮಧ್ಯೆ ಕ್ರೆಡಿಟ್ ವಾರ್ ನಡೀತಿದೆ.
ಇದು ಮೋದಿ ಸರ್ಕಾರದ (Modi Government) ಶ್ರಮ ಅಂತ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟು, ಇದು ನಮ್ಮ ಸರ್ಕಾರದ ಶ್ರಮ. ಕೇಂದ್ರ ಸರ್ಕಾರದ ಸಾಧನೆ ಆಗಿದ್ದರೆ ಬಿಜೆಪಿ ರಾಜ್ಯಗಳಲ್ಲೇಕೆ ಉದ್ಯೋಗ ಸೃಷ್ಟಿ ಆಗ್ತಿಲ್ಲ ಅಂದಿದ್ದರು. ಇದನ್ನೂ ಓದಿ: ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಬೇಕು ಅನ್ನೋದು ಕಾರ್ಯಕರ್ತರ ಅಪೇಕ್ಷೆ: ವಿಜಯೇಂದ್ರ ಸ್ಪಷ್ಟನೆ
ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಕಿಡಿಕಾರಿ, ರಾಜ್ಯ ಸರ್ಕಾರದ ಕೈಗಾರಿಕಾ ನೀತಿ, ವರ್ತನೆಯಿಂದ ಬಂಡವಾಳ ಹೂಡಿಕೆಗೆ ಪೂರವಾಗಿಲ್ಲ. ಏಥರ್, ಟೊಯೋಟಾ, ಫಾಕ್ಸ್‌ಕಾನ್ ಬೇರೆ ರಾಜ್ಯಗಳಿಗೆ ಹೋಗಿವೆ. ಉದ್ಯಮಿಗಳಿಗೆ ಡಿಸಿಎಂ ಧಮ್ಕಿ ಹಾಕ್ತಿದ್ದಾರೆ ಅಂದಿದ್ದಾರೆ.
ವಿಜಯೇಂದ್ರ ಟೀಕೆ ಬೆನ್ನಲ್ಲೇ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಅಂದಹಾಗೆ, 2023ರಲ್ಲಿ ಬೊಮ್ಮಾಯಿ ಸರ್ಕಾರದಲ್ಲಿ ಫಾಕ್ಸ್‌ಕಾನ್ ಅನುಮೋದನೆ ಕೊಟ್ಟಿತ್ತು. ಇದನ್ನು ಸಿದ್ದರಾಮಯ್ಯ ಸರ್ಕಾರ ಮುಂದುವರಿಸಿಕೊಂಡು ಬಂದಿದೆ. ಇದನ್ನೂ ಓದಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ – ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ


