ಖುಷ್ಬೂ ಮೊದಲ ಸಂಬಂಧದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ತೆಲುಗು ನಟಿ

Public TV
1 Min Read

ಹುಭಾಷಾ ನಟಿ ಖುಷ್ಬೂ ಸುಂದರ್ (Kushboo Sundar) ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾಗೆ ಗುಡ್ ಬೈ ಹೇಳಿ, ರಾಜಕೀಯ (Politics) ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಖುಷ್ಬೂ ಬಗ್ಗೆ ನಟಿ ಕಾಕಿನಾಡ ಶ್ಯಾಮಲಾ (Shyamala) ಮಾತನಾಡಿರುವ ಹೇಳಿಕೆ ಇದೀಗ ಸಖತ್ ಮಾಡುತ್ತಿದೆ. ಇದನ್ನೂ ಓದಿ:ಕನ್ನಡದ ನಟಿ ವಿಶಾಖ ಸಿಂಗ್‌ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

200ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ನಟಿ ಶ್ಯಾಮಲಾ ಅವರು ಇದೀಗ ಸಂದರ್ಶನವೊಂದರಲ್ಲಿ ಮದುವೆಗೂ ಮುನ್ನ ಖುಷ್ಬೂ ಮೊದಲ ಸಂಬಂಧದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕಾಕಿನಾಡ ಶ್ಯಾಮಲಾ ಅವರು ಪ್ರಭು- ಖೂಷ್ಬೂ ಸಂಬಂಧದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಖುಷ್ಬೂ ತುಂಬಾ ಒಳ್ಳೆಯ ವ್ಯಕ್ತಿ, ಖುಷ್ಬೂ- ಪ್ರಭು ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು ಬಳಿಕ ಮದುವೆಯಾದರು. ಇವರಿಬ್ಬರ ಮದುವೆಗೆ ಪ್ರಭು ಕುಟುಂಬದಲ್ಲಿ ಆಕ್ಷೇಪವಿದ್ದ ಕಾರಣ ಇಬ್ಬರೂ ಬೇರೆಯಾದರು ಎಂದು ಶ್ಯಾಮಲಾ ಮಾತನಾಡಿದ್ದಾರೆ.

ಮುಂಬೈನಲ್ಲಿ ಜನಿಸಿದ ಖುಷ್ಬೂ ಅವರು 90ರ ದಶಕದಲ್ಲಿ ಕಾಲಿವುಡ್‌ನಲ್ಲಿ ಸ್ಟಾರ್ ನಾಯಕಿಯಾಗಿ ಬೆಳೆದರು. ಹಿಂದಿಯ ಜೊತೆಗೆ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ. 1991ರಲ್ಲಿ ಖುಷ್ಬೂ ಮತ್ತು ಪ್ರಭು(Actor Prabhu) ‘ಚಿನ್ನಿ ತಂಬಿ’ ಚಿತ್ರದಲ್ಲಿ ನಟಿಸಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಈ ಬಗ್ಗೆ ಆಂಗ್ಲ ಸಂದರ್ಶನದಲ್ಲಿ ಖುಷ್ಬೂ ಮುಕ್ತವಾಗಿ ಪ್ರತಿಕ್ರಿಯಿಸಿದ್ದರು.

ನಾನು ಪ್ರಭು ಜೊತೆ ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದೆವು. 1993ರಲ್ಲಿ ಪೋಯಸ್ ಗಾರ್ಡನ್‌ನಲ್ಲಿರುವ ಅವರ ನಿವಾಸದಲ್ಲಿ ವಿವಾಹವಾದೆವು. ಪ್ರಭು ಅವರು ಮೊದಲೇ ಮದುವೆಯಾಗಿದ್ದರು. ಹೀಗಾಗಿ ಅವರ ತಂದೆ ಶಿವಾಜಿ ಗಣೇಶನ್ ಇದನ್ನು ಬಲವಾಗಿ ವಿರೋಧಿಸಿದರು. ಮೊದಲ ಹೆಂಡತಿಯೊದಿಗೆ ಪ್ರಭು ಅವರಿಗೆ ವೈಮಸ್ಸಿತ್ತು. ಮದುವೆಯಾದ ನಾಲ್ಕು ತಿಂಗಳ ನಂತರ ಅನಿವಾರ್ಯ ಕಾರಣಗಳಿಂದಾಗಿ ನಾವಿಬ್ಬರು ಬೇರೆಯಾಗಬೇಕಾಯಿತು ಎಂದು ಕೆಲ ವರ್ಷಗಳ ಹಿಂದೆಯೇ ಖುಷ್ಬೂ ಸ್ಪಷ್ಟನೆ ನೀಡಿದ್ದರು.

ಬಳಿಕ 2000ರಲ್ಲಿ ನಿರ್ದೇಶಕ ಸಿ.ಸುಂದರ್ C.Sundar ಜೊತೆ ಖುಷ್ಬೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಈಗ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಜಕೀಯ ರಂಗದಲ್ಲಿ ಸಕ್ರೀಯರಾಗಿದ್ದಾರೆ.

Share This Article