ವಿದ್ಯುತ್ ಸ್ಪರ್ಶ – ಒಂದೇ ಕುಟುಂಬದ ನಾಲ್ವರು ಮಕ್ಕಳು ದುರ್ಮರಣ

Public TV
1 Min Read

ಲಕ್ನೋ: ವಿದ್ಯುತ್ ಸ್ಪರ್ಶಿಸಿ  (Electrocuted) ಒಂದೇ ಕುಟುಂಬದ ನಾಲ್ವರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttar Pradesh) ಉನ್ನಾವೋದ ಗ್ರಾಮವೊಂದರಲ್ಲಿ ನಡೆದಿದೆ.

ಮೃತ ಮಕ್ಕಳನ್ನು ಮಾಯಾಂಕ್ (9), ಹಿಮಾಂಕ್ (6), ಹಿಮಾಂಶಿ (8) ಮತ್ತು ಮಾನ್ಸಿ (5) ಎಂದು ಗುರುತಿಸಲಾಗಿದೆ. ಮಕ್ಕಳು ಆಕಸ್ಮಿಕವಾಗಿ ತಮ್ಮ ಮನೆಯ ಫ್ಯಾನ್‍ನ ತಂತಿಯನ್ನು ಸ್ಪರ್ಶಿಸಿದ್ದಾರೆ. ಇದರಿಂದ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬೇಸತ್ತು ಇನ್ಸ್‌ಪೆಕ್ಟರ್ ಪತಿಯನ್ನೇ ಹತ್ಯೆಗೈದ ಪತ್ನಿ

ಘಟನೆಯ ಸಮಯದಲ್ಲಿ ಮೃತಪಟ್ಟ ಮಕ್ಕಳ ಪೋಷಕರು ಮನೆಯ ಹೊರಗಿನ ಮೈದಾನದಲ್ಲಿದ್ದರು ಎಂದು ತಿಳಿದು ಬಂದಿದೆ. ಪೋಷಕರಿಗೆ ಅಧಿಕಾರಿಗಳು ಸಾಂತ್ವನ ಹೇಳಿದ್ದಾರೆ. ಸೂಕ್ತ ಪರಿಹಾರ ನೀಡುವ ಭರವಸೆಯನ್ನು ಸ್ಥಳೀಯ ಆಡಳಿತ ನೀಡಿದೆ.

ಈ ಘಟನೆಯನ್ನು ಬೇರೆ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಏರ್‌ಪೋರ್ಟ್ ಮೇಲೆ ಅಪರಿಚಿತ ಡ್ರೋನ್ ಹಾರಾಟ – ಹೆಚ್ಚಿದ ಆತಂಕ

Share This Article