ಕುಡಿದ ಮತ್ತಲ್ಲಿ ಯುವಕನನ್ನು ಬೆತ್ತಲಾಗಿಸಿ ರಸ್ತೆಯಲ್ಲಿ ಅಟ್ಟಾಡಿಸಿದ ಪುಂಡರು – ಮೂವರ ಬಂಧನ

Public TV
1 Min Read

ಹಾಸನ: ಕುಡಿದ ಮತ್ತಿನಲ್ಲಿ ಯುವಕನೊಬ್ಬನನ್ನು (Young Man) ಬೆತ್ತಲೆ (Naked) ಮಾಡಿ ಆತನನ್ನು ರಸ್ತೆಯಲ್ಲಿ ಅಟ್ಟಾಡಿಸಿದ ಘಟನೆ ಹಾಸನ (Hassna) ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರ ಮೇಲೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ರಾತ್ರಿ ಬಾರ್ ಒಂದರ ಮುಂದೆ ಎಣ್ಣೆ ಪಾರ್ಟಿ ಮಾಡಿ ಯುವನನ್ನು ನೃತ್ಯ ಮಾಡುವಂತೆ ನಾಲ್ವರು ಹೇಳಿದ್ದಾರೆ. ಯುವಕ ಕಂಠಪೂರ್ತಿ ಕುಡಿದು ನೃತ್ಯ ಮಾಡುತ್ತಿದ್ದ ವೇಳೆ ವಿವಸ್ತ್ರಗೊಳಿಸಿ ಬಟ್ಟೆ ನೀಡದೆ ಕಾರಿನಲ್ಲಿ ರಸ್ತೆಯಲ್ಲೆಲ್ಲಾ ಓಡಾಡಿಸಿದ್ದರು. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ.

ಪೊಲೀಸರು ರಂಜಿತ್, ದಯಾನಂದ್, ಆನಂದ್, ಪ್ರತಾಪ್ ಎಂಬುವವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಈ ಪೈಕಿ ರಂಜಿತ್, ದಯಾನಂದ್ ಹಾಗೂ ಆನಂದ್‌ನನ್ನು ಬಂಧಿಸಿದ್ದಾರೆ. ಪ್ರತಾಪ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮದ್ಯ ಸಾಗಿಸುತ್ತಿದ್ದ ಆರ್ಮಿ ಫ್ಯಾಮಿಲಿಯನ್ನು ಬಸ್‌ನಿಂದ ಇಳಿಸಿದ್ದಕ್ಕೆ ಕಿರಿಕ್

ಈ ಪ್ರಕರಣದಲ್ಲಿ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಅರಕಲಗೂಡು ಪಟ್ಟಣದಲ್ಲಿ ಕುಡುಕರು ಹಾಗೂ ಪುಂಡರ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರನ್ನು ಪುಂಡರು ಚುಡಾಯಿಸುತ್ತಿದ್ದಾರೆ. ಇವರಿಗೆ ಪೊಲೀಸರ ಭಯವಿಲ್ಲದಂತಾಗಿದ್ದು ಇನ್ನಾದರೂ ಪೊಲೀಸರು ಎಚ್ಚೆತ್ತು ಕ್ರಮ ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದೇಶಭಕ್ತರ ಪಠ್ಯ ತೆಗೆದು ಕುಕ್ಕರ್ ಬ್ಲಾಸ್ಟ್ ಆರೋಪಿ ಪಾಠ ಸೇರಿಸ್ತೀರಾ?- ಕಾಂಗ್ರೆಸ್ ವಿರುದ್ಧ ಸುನೀಲ್ ಕುಮಾರ್ ಕಿಡಿ

Share This Article