ಏಪ್ರಿಲ್ 11ರಿಂದ ಕಲಬುರಗಿಯಲ್ಲಿ ನಾಲ್ಕು ದಿನ ಸಂವಿಧಾನ ನಾಟಕ ಪ್ರದರ್ಶನ

Public TV
1 Min Read

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಕಲಬುರಗಿ ರಂಗಾಯಣವು ಭಾರತದ ಸಂವಿಧಾನ ಕುರಿತು ‘ಬಹುತ್ವ ಭಾರತ ಕಥನ’ ನಾಟಕ ಪ್ರದರ್ಶನ ಮಾಡಲಿದ್ದಾರೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ರೂಪಿಸಿದ ವಿಶೇಷ ಯೋಜನೆಯಡಿ ಸಿದ್ಧಪಡಿಸಿದ ಬಹುತ್ವ ಭಾರತ ಕಥನ ನಾಟಕವನ್ನು ಸಿಯುಕೆ ಪ್ರಾಧ್ಯಾಪಕ ಡಾ.ಅಪ್ಪುಗೆರೆ ಸೋಮಶೇಖರ್ ರಚಿಸಿದ್ದು, ಅನಿಲ್ ರೇವೂರ ನಿರ್ದೇಶಿಸಿದ್ದಾರೆ. ಇದಕ್ಕೆ ಪ್ರದೀಪ್ ಅವರ ಸಹನಿರ್ದೇಶನವಿದ್ದು, ಹರಿಕೃಷ್ಣ ಸಂಚಾಲಕರಾಗಿದ್ದಾರೆ. ಈ ನಾಟಕವು ಏ.11 ರಿಂದ 14ರ ವರೆಗೆ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಏರ್ಪಡಿಸಿದೆ ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮತ್ತು ಆಡಳಿತಾಧಿಕಾರಿ ಜಗದೀಶ್ವರಿ ಅ.ನಾಶಿ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಜೆಎನ್‍ಯುಯಲ್ಲಿ ಮತ್ತೆ ರಣಾಂಗಣ – ಮಾಂಸಾಹಾರ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ

ಪ್ರತಿದಿನ ಸಂಜೆ 7 ಗಂಟೆಗೆ ನಾಟಕದ ಪ್ರದರ್ಶನವಿದ್ದು, ಏಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ಬೆಳಗ್ಗೆ 11.30ಗೆ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಏ.11 ರಂದು ಸಂಜೆ ನಾಟಕ ಪ್ರದರ್ಶನವನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಬಟ್ಟು ಸತ್ಯನಾರಾಯಣ್ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಸಿಯುಕೆ ಕುಲಸಚಿವ ಪ್ರೋ.ಬಸವರಾಜ್ ಡೋಣೂರ, ಕಾನೂನು ನಿಕಾಯದ ಡೀನ್ ಪ್ರೋ.ಎಂ.ವಿ.ಅಳಗವಾಡಿ ಆಗಮಿಸುವರು. ಈ ವೇಳೆ ನಾಟಕಕಾರರಾದ ಡಾ.ಅಪ್ಪುಗೆರೆ ಸೋಮಶೇಖರ್ ಉಪಸ್ಥಿತರಿದ್ದರು. ಇದರ ಅಧ್ಯಕ್ಷತೆಯನ್ನು ರಂಗಾಯಣ್ ನಿರ್ದೇಶಕರಾದ ಪ್ರಭಾಕರ್ ಜೋಶಿ ವಹಿಸುವರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಕೆಲವೆಡೆ ಗುಡುಗು ಸಹಿತ ಭಾರೀ ಮಳೆ, ಹಾನಿ

Share This Article
Leave a Comment

Leave a Reply

Your email address will not be published. Required fields are marked *