ಕ್ಯಾಸಿನೋದಲ್ಲಿ ಗೆದ್ದ ಹಣದ ಮೇಲೆ ಕಣ್ಣಿಟ್ಟು ಬಾಲಕಿ ಕಿಡ್ನ್ಯಾಪ್- ನಾಲ್ವರು ಅರೆಸ್ಟ್

Public TV
1 Min Read

ಬಾಗಲಕೋಟೆ: ಇಲ್ಲಿನ ನವನಗರದಲ್ಲಿ ಬಾಲಕಿಯೊಬ್ಬಳು ಟ್ಯೂಷನ್ ಮುಗಿಸಿಕೊಂಡು ಬರುವಾಗ ಚಾಕಲೇಟ್ ಕೊಡುವ ನೆಪದಲ್ಲಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

KIDNAP

ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಲೋಕೇಶ್ ಜಗಲಾಸರ ಅವರು, ಗೆದ್ದಿರುವ ಕ್ಯಾಸಿನೊ ಹಣ ಹೊಡೆಯಲೆಂದು ಬಾಲಕಿ ಅಪರಹಣ ಮಾಡಿದ್ದರು. ಆರೋಪಿಗಳನ್ನು ಕೇವಲ 18 ಗಂಟೆಯಲ್ಲಿ ಬಂಧಿಸಲಾಗಿದೆ. ಗದ್ದನಕೇರಿ ಗ್ರಾಮದ ಬೀರಪ್ಪ ಬೂದಿಹಾಳ, ಪ್ರಫುಲ್ ಪಾಟೀಲ್, ಈರಣ್ಣ ದಿವಟಗಿ, ಕಮತಗಿ ಗ್ರಾಮದ ಕೃಷ್ಣಾ ದಾಸರ ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ. ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂರು ವಾರಗಳ ಹಿಂದೆ ಅಪ್ಪು ಜೊತೆ ಮಾತನಾಡಿದ್ದೆ: ರಮ್ಯಾ

POLICE JEEP

ಬಾಲಕಿಗೆ ವಾಪಸ್ ಬಿಡಲು 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಮೊಬೈಲ್ ಕರೆ ಆಧರಿಸಿ ಪ್ರಕರಣ ಬೇಧಿಸಲಾಗಿದೆ. ಆರೋಪಿತರು ಬಾಲಕಿಯನ್ನು ಕಾರಿನಲ್ಲಿ ಹುಬ್ಬಳ್ಳಿ, ಗದಗ ಕಡೆಗಳಲ್ಲೆಲ್ಲಾ ಸುತ್ತಾಡಿ ಕೊನೆಗೆ ಬಾಲಕಿ ಮನೆ ಮುಂದೆ ಬಿಟ್ಟು ಹೋಗಿದ್ದರು. ಬಂಧಿತರಿಂದ ಎರಡು ಕಾರು, ಮೊಬೈಲ್ ಜಪ್ತಿ ಮಾಡಲಾಗಿದೆ. ಪ್ರಕರಣ ಭೇದಿಸಿದ ತಂಡದ ಕಾರ್ಯ ಶ್ಲಾಘಿಸಿ 25 ಸಾವಿರ ರೂ. ನಗದು ಬಹುಮಾನ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.  ಇದನ್ನೂ ಓದಿ: ತಂದೆಯಂತೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗ್ಬಾರ್ದು ಅನ್ನೋ ವ್ಯಕ್ತಿತ್ವ ಅಪ್ಪುದು: ವಿ. ಮನೋಹರ್

Share This Article
Leave a Comment

Leave a Reply

Your email address will not be published. Required fields are marked *