ಜೈಸಲ್ಮೇರ್‌ನಲ್ಲಿ ಬಾಂಬ್ ತರಹದ ವಸ್ತು ಪತ್ತೆ – ಭಯಭೀತರಾದ ಜನ

Public TV
1 Min Read

ಜೈಪುರ: ರಾಜಸ್ಥಾನದ(Rajastan) ಜೈಸಲ್ಮೇರ್‌ನಲ್ಲಿ(Jaisalmer) ಶುಕ್ರವಾರ ಬೆಳಗ್ಗೆ ನಿಗೂಢ ಬಾಂಬ್ ತರಹದ ವಸ್ತು ಪತ್ತೆಯಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

ಗುರುವಾರ ರಾತ್ರಿ ಪಾಕಿಸ್ತಾನವು(Pakistan) ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ನಂತರ ಜೈಸಲ್ಮೇರ್‌ನಲ್ಲಿ ಬಾಂಬ್‌ಗೆ ಹೋಲುವಂತ ವಸ್ತು ಪತ್ತೆಯಾಗಿದೆ. ಜೈಸಲ್ಮೇರ್‌ನ ಕಿಶನ್ ಘಾಟ್‌ನಲ್ಲಿರುವ(Kishan Ghat) ಗ್ರಾಮಸ್ಥರು ತಮ್ಮ ಮನೆಗಳ ಹೊರಗೆ ಈ ವಸ್ತುವನ್ನು ಕಂಡುಕೊಂಡ ಭಯಭೀತರಾಗಿದ್ದಾರೆ. ಈ ವಿಷಯ ತಿಳಿಯುತ್ತಿದಂತೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಟೈಟಲ್‌ಗೆ ಬೇಡಿಕೆ- ರಿಜಿಸ್ಟರ್ ಮಾಡಲು ಮುಗಿಬಿದ್ದ ನಿರ್ಮಾಪಕರು

ಈ ಕುರಿತು ಸ್ಥಳೀಯರೊಬ್ಬರು ಪ್ರತಿಕ್ರಯಿಸಿ, ರಾತ್ರಿಯಿಡೀ ನಮಗೆ ಸೈರನ್ ಕೇಳಿಸಿತು. ರಾತ್ರಿ 9 ಗಂಟೆಯ ಸುಮಾರಿಗೆ, ಆಕಾಶದಿಂದ ಬೀಳುತ್ತಿದ್ದ ಕಿಡಿಗಳು ಮಾತ್ರ ಕಾಣುತ್ತಿದ್ದವು. ಮನೆಯ ಹೊರಗೆ ಬಂದರೆ ದೊಡ್ಡ ದೊಡ್ಡ ಶಬ್ದಗಳು ಕೇಳುತ್ತಿದ್ದವು. ಹಾಗಾಗಿ ಮನೆಯಿಂದ ಹೊರಬರಲು ಹೆದರುತ್ತಿದ್ದೆವು. ಇಂದು ಬೆಳಗ್ಗೆ ನಾವು ನಮ್ಮ ಮನೆಯಿಂದ ಹೊರಬಂದಾಗ, ಈ ಬಾಂಬ್ ತರಹದ ವಸ್ತು ಕಂಡುಬಂದಿದೆ ಎಂದರು. ಇದನ್ನೂ ಓದಿ: ಸೇನಾ ಮುಖ್ಯಸ್ಥರ ಜೊತೆ ಹೈವೋಲ್ಟೇಜ್‌ ಸಭೆ ನಡೆಸಿದ ರಾಜನಾಥ್ ಸಿಂಗ್‌

ಬಾಂಬ್ ತರಹದ ವಸ್ತುವಿನ ಬಗ್ಗೆ ನಮಗೆ ಮಾಹಿತಿ ನೀಡಲಾಯಿತು. ಅದು ಏನೆಂದು ನಮಗೆ ಇನ್ನೂ ಖಚಿತವಿಲ್ಲ. ನಾವು ಸೇನೆಗೆ ಮಾಹಿತಿ ನೀಡಿದ್ದೇವೆ ಮತ್ತು ಬಾಂಬ್ ನಿಷ್ಕ್ರಿಯ ದಳವೂ ಬರುತ್ತಿದೆ ಎಂದು ಕೊತ್ವಾಲಿ ಸ್ಟೇಷನ್ ಹೌಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಪಾಕ್‌ ಕ್ಷಿಪಣಿ ಅವಶೇಷ ಪತ್ತೆ – ಚೀನಾ ನಿರ್ಮಿತ ಪವರ್‌ಫುಲ್‌ ಮಿಸೈಲ್‌ ಠುಸ್‌!

ಏ. 22ರಂದು ಪಹಲ್ಗಾಮ್‌ನಲ್ಲಿ ನಡೆದ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿ ಮತ್ತು ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಗುರಿಗಳ ಮೇಲೆ ಭಾರತ ಪ್ರತಿದಾಳಿ ನಡೆಸಿದೆ. ಭಾರತ ಹಾಗೂ ಪಾಕ್ ಉದ್ವಿಗ್ನದ ಬೆನ್ನಲ್ಲೇ ಹಲವು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Share This Article