HD Revanna Arrest: ಮಹಿಳೆಯರನ್ನು ಕಾಡಿಸಿ, ಪೀಡಿಸಿ, ಅಪಹರಿಸಿದ್ದರಲ್ಲಿ ಪ್ರಮುಖ ಆರೋಪಿ ಎಂದ ಕಾಂಗ್ರೆಸ್

Public TV
1 Min Read

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರನ್ನು ಬಂಧಿಸಲಾಗಿದೆ.  ಈ ಸಂಬಂಧ ಕಾಂಗ್ರೆಸ್‌, ಮಹಿಳೆಯರನ್ನು ಕಾಡಿಸಿ, ಪೀಡಿಸಿ, ಅಪಹರಿಸಿದ್ದರಲ್ಲಿ ಪ್ರಮುಖ ಆರೋಪಿ ಎಂದು ಹೇಳಿದೆ.

ಕಾಂಗ್ರೆಸ್‌ ಎಕ್ಸ್‌ನಲ್ಲೇನಿದೆ..?: ಮೋದಿಯವರ ಪ್ರಜ್ವಲ ಗ್ಯಾರಂಟಿಯಡಿಯಲ್ಲಿ ಮೊದಲ ಬಂಧನ ಆಗಿದೆ. ಈ ಬಂಧನ ಜನುಮಜನುಮದ ಅನುಬಂಧನ..? ಮಹಿಳಾ ಪೀಡಕರು, ಮಹಿಳಾ ಅಪಹರಣಕಾರರು, ಅತ್ಯಾಚಾರಿಗಳನ್ನು ಕಂಡರೇ ಮೋದಿಗೆ ಎಲ್ಲಿಲ್ಲದ ಪ್ರೀತಿ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೆವಣ್ಣ ಜೊತೆಗೆ ಎನ್‍ಡಿಎ ಮೈತ್ರಿಕೂಟದ ಸ್ಟಾರ್ ಪ್ರಚಾರಕ ರೇವಣ್ಣ ಅವರೂ ಮಹಿಳೆಯರನ್ನು ಕಾಡಿಸಿ, ಪೀಡಿಸಿ, ಅಪಹರಿಸಿದವರಲ್ಲಿ ಪ್ರಮುಖ ಆರೋಪಿ. ಮಹಿಳಾ ಪೀಡಕ ಆರೋಪಿಯ ಕೈಯನ್ನು ಗಟ್ಟಿಯಾಗಿ ಹಿಡಿದಿರುವ ಮೋದಿಯವರು ದೇಶಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಂಧನದ ಬೆನ್ನಲ್ಲೇ ಎಕ್ಸ್‌ ಮಾಡಿ, ಮಹಿಳೆಯರ ಮಾನ ಪ್ರಾಣ ಘನತೆ ಎತ್ತಿ ಹಿಡಿಯುವಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಹೆಚ್‍ಡಿ ರೇವಣ್ಣರನ್ನು ಬಂಧಿಸಿದ ಎಸ್‍ಐಟಿ ತಂಡ ಮಹಿಳಾ ಪೀಡನೆಯ ವಿಕೃತ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ. ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರದ ಬದ್ಧತೆ ಅಚಲವಾಗಿರುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ.

ರೇವಣ್ಣ ಬಂಧನದ ಬಗ್ಗೆ ಸಿಎಂ-ಡಿಸಿಎಂ ಕೂಡ ಮಾತಾಡಿದ್ದಾರೆ. ಇದೇ ವೇಳೆ ಜೆಡಿಎಸ್ ನಾಯಕರು ಎಚ್ಚರಿಕೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹೆಚ್‍ಡಿ ರೇವಣ್ಣ ಅರೆಸ್ಟ್ ಆಗಿದ್ದಾರೆ. ಕಾನೂನು ಪ್ರಕಾರವೇ ಅವರು ನಡೆದುಕೊಳ್ಳಲಿದ್ದಾರೆ ಎಂದು ಜಿಟಿ ದೇವೇಗೌಡ ತಿಳಿಸಿದ್ದಾರೆ. ಸದ್ಯ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದು, ಸದ್ಯದ ಬೆಳವಣಿಗೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.. ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Share This Article