IPL 2025; ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಎದ್ದು ಕುಣಿದು ಕುಪ್ಪಳಿಸಿದ ಬ್ರಿಟನ್‌ ಮಾಜಿ ಪ್ರಧಾನಿ

Public TV
1 Min Read

ಅಹಮದಾಬಾದ್: ಪಂಜಾಬ್‌ ವಿರುದ್ಧ ಐಪಿಎಲ್‌ ಫೈನಲ್‌ ಪಂದ್ಯ ವೀಕ್ಷಣೆಗೆ ಅಹಮದಾಬಾದ್‌ಗೆ ಆಗಮಿಸಿದ್ದ ಬ್ರಿಟನ್‌ ಮಾಜಿ ಪ್ರಧಾನಿ ಹಾಗೂ ಬೆಂಗಳೂರಿನ ಅಳಿಯ ರಿಷಿ ಸುನಕ್‌ (Rishi Sunak) ಅವರು ಆರ್‌ಸಿಬಿ (RCB) ಗೆಲುವು ದಾಖಲಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದರು.

ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ರಿಷಿ ಸುನಕ್‌ ಅವರು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ ಫೈನಲ್‌ ಪಂದ್ಯ ವೀಕ್ಷಿಸಿದರು. ಮ್ಯಾಚ್‌ನ ಆರಂಭದಿಂದಲೂ ಕೊನೆಯ ವರೆಗೂ ಹುರುಪಿನಿಂದಲೇ ಪಾಲ್ಗೊಂಡಿದ್ದರು. ಇದನ್ನೂ ಓದಿ: ಲಾಯಲ್‌ ಫ್ಯಾನ್ಸ್‌ಗಾಗಿ ರಾಯಲ್‌ ಗೆಲುವು – ಎಲ್ಲೆಡೆ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿ ಮೆರೆದಾಡಿದ ಫ್ಯಾನ್ಸ್‌

ಆರ್‌ಸಿಬಿ ಬ್ಯಾಟರ್‌ಗಳು ಸಿಕ್ಸ್‌, ಫೋರ್‌ ಹೊಡೆದಾಗಲೆಲ್ಲ ರಿಷಿ ಸುನಕ್‌ ಅವರು ಎದ್ದು ಜೋಶ್‌ನಲ್ಲಿ ಸಂಭ್ರಮಿಸುತ್ತಿದ್ದರು. ಹಾಗೆಯೇ ಬೌಲಿಂಗ್‌ ವೇಳೆ ಪಂಜಾಬ್‌ ವಿಕೆಟ್‌ ಬೀಳುತ್ತಿದ್ದಾಗಲೂ ಖುಷಿ ವ್ಯಕ್ತಪಡಿಸುತ್ತಿದ್ದರು. ಅವರ ಜೊತೆ ಐಸಿಸಿ ಅಧ್ಯಕ್ಷ ಜಯ್‌ ಶಾ ಕೂಡ ಇದ್ದರು.

ನಾನು ಬೆಂಗಳೂರಿನ ಅಳಿಯ. ಆರ್‌ಸಿಬಿಗೂ ನನಗೂ ಬಿಡಿಸಲಾಗದ ನಂಟಿದೆ. ವಿರಾಟ್‌ ಕೊಹ್ಲಿ ನನ್ನ ಫೇವರಿಟ್‌ ಎಂದು ಈ ಹಿಂದೆ ರಿಷಿ ಸುನಕ್‌ ಹೇಳಿಕೊಂಡಿದ್ದರು. ಇನ್ಫೋಸಿಸ್‌ನ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಪುತ್ರಿಯನ್ನು ವಿವಾಹವಾದಾಗಿನಿಂದಲೂ ರಿಷಿ ಸುನಕ್‌ ಅವರಿಗೆ ಆರ್‌ಸಿಬಿ ಮೇಲೆ ವಿಶೇಷ ಆಸಕ್ತಿ. ಅಲ್ಲಿಂದಲೇ ಅವರಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಒಲವು ಹೆಚ್ಚಾಗಿದ್ದು. ಇದನ್ನೂ ಓದಿ: ಚೊಚ್ಚಲ ಟ್ರೋಫಿ ಗೆದ್ದ ಆರ್‌ಸಿಬಿಗೆ ಸಿಕ್ಕ ಬಹುಮಾನ ಎಷ್ಟು..? – ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌…

ಫೈನಲ್‌ ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಬ್ರಿಟನ್‌ ಮಾಜಿ ಪ್ರಧಾನಿ ವಿಶ್‌ ಮಾಡಿದ್ದರು. ಅಷ್ಟೇ ಅಲ್ಲದೇ, ಭಾರತಕ್ಕೆ ಆಗಮಿಸಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿದ್ದು ವಿಶೇಷವಾಗಿತ್ತು.

Share This Article