ವೆಬ್ ಸರಣಿ ರೂಪದಲ್ಲಿ ಬರಲಿದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ

Public TV
1 Min Read

ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆಯ ಕುರಿತು ಕನ್ನಡದಲ್ಲಿ ಸಿನಿಮಾ ಬರುತ್ತಿದೆ ಎಂದು ಹಲವು ವರ್ಷಗಳಿಂದ ಸುದ್ದಿ ಆಗುತ್ತಲೇ ಇದೆ. ಆದರೂ, ಇನ್ನೂ ಅದಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ಅಷ್ಟರಲ್ಲಿ ಹಿಂದಿಯಲ್ಲಿ ವೆಬ್ ಸರಣಿಯೊಂದು ಮೂಡಿ ಬರಲಿದೆ. ನಿರ್ದೇಶಕ ನಾಗೇಶ್ ಕುಕನೂರು (Nagesh Kukanur) ಈ ವೆಬ್ ಸರಣಿಯ ಸೂತ್ರಧಾರರಾಗಿದ್ದು, ಅಪ್ಲಾಸ್ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿ ಈ ಸರಣಿ ನಿರ್ಮಾಣಗೊಳ್ಳಲಿದೆ.

ಈಗಾಗಲೇ ರಾಜೀವ್ ಗಾಂಧಿ ಹತ್ಯೆಯ ಕುರಿತು ಅನೇಕ ಡಾಕ್ಯುಮೆಂಟರಿಗಳು, ಕೆಲವು ಸಿನಿಮಾಗಳಲ್ಲಿ ದೃಶ್ಯಗಳಾಗಿ ಹಾಗೂ ಈ ಕುರಿತು ಅನೇಕರು ಪುಸ್ತಕಗಳನ್ನು ಬರೆದಿದ್ದಾರೆ. ಇದೇ ಮೊದಲ ಬಾರಿಗೆ ವೆಬ್ ಸರಣಿ ರೂಪದಲ್ಲಿ ರಾಜೀವ್ ಗಾಂಧಿ ಹತ್ಯೆ ಜನರೆದುರು ಬರಲಿದೆ. ಈ ವೆಬ್ ಸರಣಿಗಾಗಿ ಪತ್ರಕರ್ತ ಅನಿರುದ್ಧ ಮಿತ್ರ ಬರೆದಿರುವ ‘90 ಡೇಸ್: ದಿ ಟ್ರು ಸ್ಟೋರಿ ಆಫ್ ದಿ ಹಂಟ್ ಫಾರ್ ರಾಜೀವ್ ಗಾಂಧಿ ಅಸಾಸಿನ್; ಪುಸ್ತಕವನ್ನು ಆಧರಿಸಲಾಗಿದೆ. ಇದನ್ನೂ ಓದಿ:ರಾಕೇಶ್‍ಗೆ ಸೋನು ಮೇಲೆ ಲವ್ವಾಗಿದ್ಯಾ? ಏನಿದು ಬಿಗ್‍ಬಾಸ್ ಮನೆಯಲ್ಲಿ ಹೊಸ ಕಹಾನಿ

ಈ ವೆಬ್ ಸರಣಿಗೆ ಟ್ರೈಯಲ್ ಆಫ್ ಅಸಾಸಿನ್’ ಎಂದು ಹೆಸರಿಡಲಾಗಿದೆ. ರಾಜೀವ್ ಗಾಂಧಿ ಹತ್ಯೆಗೆ ಕಾರಣವಾದ ಅಂಶ, ಅದರ ಹಿಂದಿನ ರೂವಾರಿಗಳು, ಎಲ್‍ಟಿಟಿ ಪ್ರಭಾಕರನ್ (Prabhakar), ಅವರ ತಯಾರಿ ಹೀಗೆ ಏನೆಲ್ಲ ರೋಚಕ ಸಂಗತಿಗಳು ಇರಲಿವೆಯಂತೆ. ಅಲ್ಲದೇ, ರಾಜೀವ್ ಗಾಂಧಿ ಹತ್ಯೆಯ ನಂತರದ ಸಂಗತಿಗಳನ್ನು ಸೇರಿಸಲಿದ್ದಾರಂತೆ ನಿರ್ದೇಶಕರು. ಈಗಾಗಲೇ ಚಿತ್ರಕಥೆ ಕೂಡ ರೆಡಿಯಾಗಿದೆಯಂತೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *