ಒಬ್ಬ ರೈತನ ಮಗನಾಗಿ ನನಗೆ ನೋವಿದೆ: ಹೆಚ್‌ಡಿಡಿ

Public TV
3 Min Read

ಹಾಸನ: ಒಬ್ಬ ರೈತನ ಮಗನಾಗಿ ನನಗೆ ನೋವಿದೆ ಎಂದು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಪ್ರತಿಕ್ರಿಯೆ ನೀಡಿದರು.

ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಾಲ್ಕು ದಿನಗಳ ಹಿಂದೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಸರ್ಕಾರ ಇನ್ನೂ ಒಂದು, ಎರಡು ಗಂಟೆಗಳಲ್ಲಿ ತನ್ನ ನಿಲುವನ್ನು ಹೇಳಬಹುದು. ನಾನು ಬರೆದಿರುವ ಪತ್ರದಲ್ಲಿ ನಮ್ಮ ಸ್ಟ್ಯಾಂಡಿಂಗ್ ಕ್ರಾಪ್‌ಗೆ 70 ಟಿಎಂಸಿ ಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದೇನೆ. ಆದರೆ ತಮಿಳರು ಕೊಡುವ ಅಂಕಿ ಅಂಶಗಳೇ ಬೇರೆ. ಸ್ಥಳ ಪರಿಶೀಲನೆ ಮಾಡದೆ ಕೆರೆ ತುಂಬಿಸಿಕೊಂಡಿದ್ದೇವೆ. ಅದನ್ನು ಬಂದು ನೋಡಿದ್ರೆ ಎಲ್ಲಾ ಮುಳುಗಿ ಹೋಗುತ್ತೆ ಅನ್ನೋದು ನಮ್ಮ ರಾಜ್ಯದ ಅಧಿಕಾರಿಗಳ ಭಾವನೆ. ನಾನು ನೀರಾವರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಒಬ್ಬ ಸಣ್ಣ ಇಂಜಿನಿಯರಿಂಗ್ ಆಗಿ, ದೇಶದ ಪ್ರಧಾನ ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ಒಬ್ಬ ರೈತನ ಮಗನಾಗಿ ನನಗೆ ನೋವಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯಿಲ್ಲ: ಜಿ.ಟಿ.ದೇವೇಗೌಡ

ಕಾವೇರಿ ವಿಷಯದಲ್ಲಿ ಜೆಡಿಎಸ್-ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಆರೋಪ ಕುರಿತು ಮಾತನಾಡಿ, ನಾನು ಪತ್ರ ಬರೆದಿದ್ದನ್ನು ಸಿದ್ದರಾಮಯ್ಯ ಅವರೇ ವೆಲ್‌ಕಮ್ ಮಾಡಿದ್ದಾರೆ. ಸರ್ಕಾರ ಏನು ತೀರ್ಮಾನ ಮಾಡುತ್ತೋ ಮಾಡಲಿ. ಹಿಂದೆ ಸಂಕಷ್ಟ ಬಂದಾಗ ಸಿದ್ದರಾಮಯ್ಯ, ವಕೀಲರು ನಮ್ಮ ಮನೆಗೆ ಬಂದಿದ್ದರು. ನಾನು ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತೆ. ಅನಂತ್‌ಕುಮಾರ್ ದೆಹಲಿಯಿಂದ ಬಂದರು. ಇದೇ ಪ್ರಧಾನಮಂತ್ರಿ ಇದ್ದರು. ದೇವೇಗೌಡರು ಏನು ಹೇಳಿದ್ದಾರೆ, ಅದರಂತೆ ಮಾಡುತ್ತೇನೆ ಎಂದಿದ್ದರು. ಈಗ ಆ ಶಕ್ತಿ ನನ್ನಲ್ಲಿ ಇಲ್ಲ. ನೀವು ಕರುಣೆ ತೋರಿಸಬೇಕು. ಈಗ 93 ವರ್ಷ ನನಗೆ ಎಂದು ಹೇಳಿದರು.

1962 ರಲ್ಲಿ ಅಸೆಂಬ್ಲಿಗೆ ಎಂಟ್ರಿಯಾದೆ. ನನ್ನ ಹೋರಾಟ ಅಲ್ಲಿಂದ ಪ್ರಾರಂಭವಾಯ್ತು. 1964 ರಲ್ಲಿ ನಿಜಲಿಂಗಪ್ಪ ಅವರು ಇದ್ದಾಗ ಅಸೆಂಬ್ಲಿಯಲ್ಲಿ ನಿರ್ಣಯ ಆಗಿದೆ. ಕಮಿಟಿ ವರದಿ ಕೊಟ್ಟಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕೆಲವರು ಶುಕ್ರವಾರ ಬಂದ್ ಮಾಡ್ತರಂತೆ. ಕೆಲವರು ಇವತ್ತು ಮಾಡಿದ್ದಾರೆ. ಕೆಲವರು ವಿಧಾನಸೌಧ ಮುತ್ತಿಗೆ ಹಾಕ್ತಾರಂತೆ. ಇದು ಕರ್ನಾಟಕ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಗೆ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಿಲ್ವಾ?: ಪ್ರಿಯಾಂಕ್ ಖರ್ಗೆ

ಕುಮಾರಸ್ವಾಮಿ ಅವರು ಡ್ಯಾಂನ ಸ್ಥಳ ಪರಿಶೀಲನೆ ಮಾಡಿ, ಅಲ್ಲಿ ನೀರು ಎಷ್ಟಿದೆ ಎಂದು ವಿವರ ತೆಗೆದುಕೊಂಡು ಬಂದ ಮೇಲೆ ನಾನು ಪತ್ರ ಬರೆದಿದ್ದೇನೆ. ನಿಷ್ಪಕ್ಷಪಾತವಾಗಿ ಎರಡು ರಾಜ್ಯಗಳ ಸ್ಥಿತಿಯನ್ನು ಪರಿಶೀಲನೆ ಮಾಡಲಿ. ಒಂದು ಟೀಂ ಕಳುಹಿಸಲಿ, ವಾಸ್ತವ ಸ್ಥಿತಿ ತಿಳಿಯಲಿ. ನಾನು ಬರೆದ ಪತ್ರದ ಸಾರಾಂಶ ಇದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಎಲ್ಲರೂ ಅದನ್ನು ಸ್ವಾಗತಿಸಿದ್ದಾರೆ. ಇವತ್ತು ಸಿಡಬ್ಯುಆರ್‌ಸಿ ಸಭೆ ಇತ್ತು. ಅವರು ಕುಳಿತು ನಿರ್ಣಯ ಮಾಡಿದ್ದಾರೆ. ಸಿಡಬ್ಯುಆರ್‌ಸಿ ಆದೇಶದಂತೆ 63 ಸಾವಿರ ಕ್ಯೂಸೆಕ್ ನೀರು ಬಿಡಬೇಕು. ಆರು ಟಿಎಂಸಿ ನೀರು ಬಿಡಬೇಕು. ನಮ್ಮ ಸರ್ಕಾರ ಕೊಟ್ಟಿರುವ ಲೆಕ್ಕ 56 ಟಿಎಂಸಿ. ನಮ್ಮ ಸ್ಟ್ಯಾಂಡ್ 70 ಟಿಎಂಸಿ ಬೇಕು, ಅದನ್ನು ಒದಗಿಸಲು ಇವರ ಕೈಯಲ್ಲಿ ಆಗಲ್ಲ. ಏನು ಮಾಡುತ್ತಾರೋ ಗೊತ್ತಿಲ್ಲ ಎಂದರು.

ಸರ್ಕಾರದ ನಿಲುವನ್ನು ಇನ್ನೂ ಹೇಳಿಲ್ಲ. ಈಗ ವೈಯುಕ್ತಿಕ ಅಭಿಪ್ರಾಯ ಕೊಡುವುದು ಸೂಕ್ತವಲ್ಲ. ಈ ವಿಷಯದಲ್ಲಿ ಒಬ್ಬ ಹಿರಿಯ ರಾಜಕಾರಣಿ ಆಗಿ ಮೊದಲಿನಿಂದಲೂ ಕಾವೇರಿ ಬಗ್ಗೆ ಐಕ್ಯತೆ ಇಲ್ಲಾ ಎಂದು ಹಲವಾರು ಬಾರಿ ಹೇಳಿದ್ದಾರೆ. ತಮಿಳುನಾಡಿನಲ್ಲಿ ಐಕ್ಯತೆ ಇದೆ. ಸರ್ಕಾರದ ನಿಲುವು ಬಂದ ಮೇಲೆ ನಾನು ನನ್ನ ಅಭಿಪ್ರಾಯ ಹೇಳುತ್ತೇನೆ. ಸರ್ಕಾರದ ತೀರ್ಮಾನಕ್ಕೆ ನಾನು, ಕುಮಾರಸ್ವಾಮಿ ಸಹಕರಿಸಬೇಕಾಗುತ್ತದೆ ಎಂದು ತಿಳಿಸಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್