ಮಳೆಯ ನಡುವೆ ಶ್ರೀ ಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿ

Public TV
2 Min Read

– ಇತಿಹಾಸ ಪ್ರಸಿದ್ಧ ಶ್ರೀನಗರದ ಶ್ರೀ ಜ್ಯೇಷ್ಟೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
– ಆ ಶಿವನೇ ಇಲ್ಲಿಗೆ ಕರೆಸಿಕೊಂಡಿದ್ದಾನೆ ಎಂದು ಭಾವುಕ

ಶ್ರೀನಗರ: ಎರಡು ದಿನಗಳಿಂದ ಕಾಶ್ಮೀರ (Jammu Kashmir) ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು, ಶುಕ್ರವಾರ ಇಲ್ಲಿನ ಶ್ರೀ ಶಂಕರಾಚಾರ್ಯ ಬೆಟ್ಟದಲ್ಲಿರುವ ಶ್ರೀ ಜ್ಯೇಷ್ಟೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಶಿವನ ದೇವಸ್ಥಾನವೆಂದೇ ಕರೆಯಲ್ಪಡುವ ಈ ಪವಿತ್ರ ಶಂಕರಾಚಾರ್ಯ ದೇವಸ್ಥಾನದಲ್ಲಿ ದೇವರ ದರ್ಶನ‌ ಪಡೆದು ಪ್ರಾಥನೆ ಸಲ್ಲಿಸಿದ ಮಾಜಿ ಪ್ರಧಾನಿ, ಈ ಕ್ಷಣ ನನ್ನ ಬದುಕಿನ ಅನನ್ಯ ಕ್ಷಣ. ಶಿವ ದರ್ಶನದಿಂದ ಧನ್ಯನಾಗಿದ್ದೇನೆ ಎಂದು ಭಾವುಕರಾದರು. ಇದನ್ನೂ ಓದಿ: ವಾಧ್ವಾನ್ ಪೋರ್ಟ್ ಪ್ರಾಜೆಕ್ಟ್ ಉದ್ಘಾಟನೆ, ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾಗಿಯಾದ ಪ್ರಧಾನಿ ಮೋದಿ

ನನ್ನನ್ನು ಇಲ್ಲಿಗೆ ಆ ಶಿವನೇ ಕರೆಸಿಕೊಂಡಿದ್ದಾನೆ ಎಂದು ಹೇಳಿದ ಮಾಜಿ ಪ್ರಧಾನಿಗಳು, ಬಹಳ ಹೊತ್ತು ದೇವಾಲಯದಲ್ಲಿಯೇ ಇದ್ದರು. ಮಳೆಯ ನಡುವೆಯೇ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರ ಸಹಾಯದಿಂದ ಮೆಟ್ಟಿಲು ಹತ್ತಿದ ಹೆಚ್‌ಡಿಡಿ, ಶಿವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಇಲ್ಲಿಗೆ ಭೇಟಿ ನೀಡಿ ಶಿವನ‌‌ ದರ್ಶನ ಪಡೆಯಬೇಕೆಂಬುದು ನನ್ನ ಜೀವಮಾನದ ಆಸೆಯಾಗಿತ್ತು. ಇವತ್ತು ನನ್ನ ಆಸೆ ನೆರವೇರಿದೆ. ನನ್ನನ್ನು ಇಲ್ಲಿಗೆ ಕರೆಸಿಕೊಂಡ ಆ ದೇವರಿಗೆ ಆಭಾರಿಯಾಗಿದ್ದೇನೆ ಎಂದು ಅವರು ಹೇಳಿದರು. ಇದನ್ನೂ ಓದಿ: ಅಸ್ಸಾಂ ವಿಧಾನಸಭೆಯ ಶುಕ್ರವಾರದ 2 ಗಂಟೆ ಅವಧಿಯ ನಮಾಜ್ ಬ್ರೇಕ್‌ಗೆ ತಡೆಯೊಡ್ಡಿದ ಸಿಎಂ ಶರ್ಮಾ

ದೇಗುಲಕ್ಕೆ ತೆರಳಿದ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಿಗೆ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರು ಭದ್ರತೆ ಒದಗಿಸಿದ್ದರು. ಗುರುವಾರ ಉರಿಯ ಜಲವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ್ದ ದೇವೇಗೌಡರು, ಅಲ್ಲಿಗೆ ತೆರಳಲು ಶ್ರೀನಗರದಿಂದ ಬಾರಮುಲ್ಲಾವರೆಗೂ ರೈಲಿನಲ್ಲಿ ಪ್ರಯಾಣ ಮಾಡಿದ್ದರು.

ಮಾಜಿ ಪ್ರಧಾನಿಗಳು ಇಲ್ಲಿನ ದಾಲ್ ಸರೋವರಕ್ಕೂ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ, ಮಳೆಯ ಕಾರಣ ಅಲ್ಲಿಗೆ ಭೇಟಿ ನೀಡಲಾಗಲಿಲ್ಲ. ಮುಂದಿನ ಮಾರ್ಚ್ ತಿಂಗಳಿನಲ್ಲಿ ಮತ್ತೆ ಇಲ್ಲಿಗೆ ಬರುವೆ ಎಂದು ತಿಳಿಸಿದರು. ಇದನ್ನೂ ಓದಿ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ – ಕ್ಷಮೆಯಾಚಿಸಿದ ಪ್ರಧಾನಿ ಮೋದಿ

Share This Article