ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪದ ಬಾನು ಮುಷ್ತಾಕ್ ನಾಡದೇವತೆಯನ್ನು ಒಪ್ಪುತ್ತಾರಾ: ಪ್ರತಾಪ್ ಸಿಂಹ ಪ್ರಶ್ನೆ

Public TV
3 Min Read

ಮೈಸೂರು: ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ? ಎಂದು ಸಾಹಿತಿ ಬಾನು ಮುಷ್ತಾಕ್ (Banu Mushtaq) ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಂಡಿರುವ ಅವರು, 2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಬಾನು ಮುಷ್ತಾಕ್ ಮಾತನಾಡಿದ್ದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಬೂಕರ್ ಭಾನು? ಎಂದು ಬರೆದು ಅಸಮಾಧಾನ ಹೊರಹಾಕಿದ್ದಾರೆ. ಭಾಷಣದಲ್ಲಿ ಬಾನು ಮುಷ್ತಾಕ್ ಕನ್ನಡ ಬಾವುಟದ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಈಗ ಕನ್ನಡಿಗರ ಆಕ್ರೋಶಕ್ಕೂ ಗುರಿಯಾಗಿದೆ.ಇದನ್ನೂ ಓದಿ: ಟಾಕ್ಸಿಕ್ ಭರ್ಜರಿ ಆ್ಯಕ್ಷನ್ ಶುರು, ಹಾಲಿವುಡ್‌ನಿಂದ ಬಂದ್ರು ಜೆಜೆ ಪೆರ‍್ರಿ

ಭಾನುವಾರ (ಆ.24) ಈ ಕುರಿತು ಪ್ರತಾಪ ಸಿಂಹ ಮಾಧ್ಯಮದವರೊಂದಿಗೆ ಮಾತನಾಡಿ, ಇತ್ತೀಚಿಗಷ್ಟೇ ಹಾರ್ಟ್ ಲ್ಯಾಂಪ್ ಸಾಹಿತಿ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳು. ನೀವು ಈ ಪ್ರಶಸ್ತಿ ಪಡೆದ ಮೊದಲ ಕನ್ನಡತಿಯಾಗಿದ್ದೀರಿ. ಈ ಕುರಿತು ನಮಗೆ ಬಹಳ ಹೆಮ್ಮೆಯಿದೆ. ರಾಜ್ಯ ಸರ್ಕಾರ ಬಾನು ಮುಷ್ತಾಕ್ ಅವರನ್ನು ನಾಡಹಬ್ಬ ದಸರಾದ ಉದ್ಘಾಟನೆಗೆ ಆಹ್ವಾನಿಸಿದೆ. ಅವರು ಕೂಡ ಒಪ್ಪಿಕೊಂಡಿದ್ದಾರೆ. ಬಾನು ಮುಸಲ್ಮಾನರು ಎಂಬ ಕಾರಣಕ್ಕೆ ನಾನು ಈ ಮಾತನ್ನು ಹೇಳುತ್ತಿಲ್ಲ. ನಿಮ್ಮ ಸಾಧನೆಗೆ ನಮ್ಮ ಹೆಮ್ಮಯಿದೆ. ನಿಮಗೆ ಬೂಕರ್ ಪ್ರಶಸ್ತಿ ಬಂದಿದೆ. ಇದು ರಾಜ್ಯದ ಜನರಿಗೆ ಖುಷಿ ಇದೆ. ಆದರೆ ದಸರಾ ಜಾತ್ಯತೀತತೆಯ ಪ್ರತೀಕ ಅಲ್ಲ, ಇದು ಧಾರ್ಮಿಕ ಆಚರಣೆ. ಇದು ನಮ್ಮ ಹಬ್ಬ. ಮೈಸೂರಿನ ಯದುವಂಶ ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಶ್ರೀರಂಗಪಟ್ಟಣದಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಿ ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ಇಂದಿಗೂ ಕೂಡ ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ಎಲ್ಲ ವಿಧಿವಿಧಾನಗಳು ನಡೆಯುತ್ತವೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಿರುವುದರಿಂದ ಈ ಸಾರ್ವಜನಿಕ ಆಚರಣೆಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಆದರೆ ಇದು ಜಾತ್ಯಾತೀತ ಪ್ರತೀಕವಲ್ಲ ಎಂದರು.

ತಾಯಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಅಲ್ಲಿ ಪುಪ್ಪಾರ್ಚನೆ ಮಾಡಿ, ಪೂಜೆ ಮಾಡಿ ವಿದ್ಯುಕ್ತವಾಗಿ ದಸರಾ ಆಚರಣೆ ಪ್ರಾರಂಭವಾಗುತ್ತದೆ. ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದ್ಯಾ? ನಮ್ಮ ಆಚರಣೆಯನ್ನು ಅವರು ಪಾಲಿಸಿಕೊಂಡು ಬಂದಿದ್ದಾರಾ? ಈ ದಸರಾ ಆಚರಣೆಗೆ ಅವರನ್ನು ಆಹ್ವಾನಿಸುವುದಾದರೆ ಅವರು ಈವರೆಗೂ ಯಾವತ್ತಾದರೂ ತಾನು ತಾಯಿ ಚಾಮುಂಡಿ ಭಕ್ತೆ ಎಂದು ತೋರಿಸಿಕೊಂಡು ಬಂದಿದ್ದಾರಾ? ಹಾಗಾದ್ರೆ ಯಾಕೆ ಆಹ್ವಾನಿಸುತ್ತಿದ್ದೀರಾ? ಇದು ಮೈಸೂರು ಮಹಾರಾಜರು ಅಥವಾ ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಉಳಿಸಿಕೊಂಡು ಬಂದ ಪರಂಪರೆಯಾಗಿದೆ. ಅಧಿದೇವತೆ ತಾಯಿ ಚಾಮುಂಡಿಯನ್ನು ಭಕ್ತಿಭಾವದೊಂದಿಗೆ ಪೂಜಿಸಬೇಕು. ಇದು ರಿಬ್ಬನ್ ಕಟ್ ಮಾಡುವ ಸರ್ಕಾರಿ ಕಾರ್ಯಕ್ರಮವಲ್ಲ, ತಾಯಿ ಮೇಲೆ ಅಚಲವಾದ ನಂಬಿಕೆ, ವಿಶ್ವಾಸ ಪ್ರಕಟ ಮಾಡುವಂತ ಆಚರಣೆಯಾಗಿದೆ. ಇದಕ್ಕೆ ಬಾನು ಮುಷ್ತಾಕ್ ಅವರು ಸೂಕ್ತನಾ ಎನ್ನುವ ಪ್ರಶ್ನೆ. ಇದರ ಬದಲು ಮುಂದಿನ ಸಾಹಿತ್ಯ ಸಮ್ಮೇಳನಕ್ಕೆ ಕರೆದು ಅವರನ್ನು ಅಧ್ಯಕ್ಷರನ್ನಾಗಿ ಮಾಡಿ. ಆದರೆ ಧಾರ್ಮಿಕ ಹಬ್ಬಕ್ಕೆ ಅವರನ್ನು ಆಹ್ವಾನಿಸುವುದಕ್ಕೆ ಏನು ಸಂಬಂಭವಿದೆ? ಮಹಾರಾಜರ ಪರಂಪರೆಯನ್ನು ಯಾಕೆ ಒಡೆಯುತ್ತಿದ್ದೀರಾ? ಹಿಂದೆ ಬರಗೂರು ರಾಮಚಂದ್ರಪ್ಪ ಅವರು ಬಂದಾಗ ನಾನು ದೇವಸ್ಥಾನದೊಳಗೆ ಹೋಗಲ್ಲ, ದೀಪ ಹಚ್ಚಲ್ಲ ಎಂದರು. ಸಿದ್ದರಾಮಯ್ಯನವರೇ ಯಾಕೆ ಇಂತವರನ್ನು ಕರೆಯುತ್ತೀರಾ? ಹಿಂದೂ ಆಚರಣೆ, ನಂಬಿಕೆ ವಿರೋಧಿಗಳನ್ನೇ ಯಾಕೆ ಕರೆಯುತ್ತೀರಾ? ಹಿಂದೆ ಹಿಂದೂ ಧರ್ಮದ ಆಚರಣೆ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ಗಿರೀಶ್ ಕಾರ್ನಾಡ್ ಅವರನ್ನು ಕರೆದಿದ್ದರು, ಈಗ ಬಾನು ಮುಷ್ತಾಕ್ ಅವರನ್ನು ಕರೆದಿದ್ದಿರಾ ಯಾಕೆ? ಎಂದು ಕಿಡಿಕಾರಿದರು.ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಮನೆ ಮನೆ ಕಸ ಸಂಗ್ರಹದ ಆಟೋಗಳ ಸಮಯ ಬದಲಾವಣೆ

Share This Article