ಕಾಂಗ್ರೆಸ್‌ನ ಚೀಪ್ ಯೋಜನೆಗಳಿಂದಾಗಿ ಸಿದ್ದರಾಮಯ್ಯನವ್ರು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ: ಸುರೇಶ್ ಗೌಡ

By
2 Min Read

ಮಂಡ್ಯ: ಕಾಂಗ್ರೆಸ್‌ನವರು ಕೊಟ್ಟಿರುವ ಚೀಪ್ ಯೋಜನೆಗಳಿಂದಾಗಿ ಸಿದ್ದರಾಮಯ್ಯ ಅವರೇ ರಾಜೀನಾಮೆ ಕೊಟ್ಟರೂ ಆಶ್ಚರ್ಯ ಇಲ್ಲ ಎಂದು ಮಾಜಿ ಶಾಸಕ ಸುರೇಶ್‌ಗೌಡ ಹೇಳಿದರು.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ಮಾಡ್ತಾರೆ. ಕಾಂಗ್ರೆಸ್ ಅವರು ಮಾಡಿರುವ ಚೀಪ್ ಯೋಜನೆಗಳಿಂದ ಸಿದ್ದರಾಮಯ್ಯ ಅವರೇ ರಾಜೀನಾಮೆ ಕೊಟ್ಟರೂ ಆಶ್ಚರ್ಯ ಇಲ್ಲ. ಸರ್ಕಾರ ನಡೆಸಲು ಸಿದ್ದರಾಮಯ್ಯ ಅವರ ಕೈಯಲ್ಲಿ ಆಗುತ್ತಿಲ್ಲ. ಪಂಜಾಬ್ ಸ್ಥಿತಿ ಇಂದು ಏನಾಗಿದೆ. ಅದರ 10% ರಷ್ಟು ಕರ್ನಾಟಕಕ್ಕೆ ಆಗುತ್ತೆ. ಸರ್ಕಾರ ನಡೆಸುತ್ತಿರೋರು ಎಷ್ಟು ಸಾಲ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ: ಪೂರ್ಣಾವಧಿ ಸಿಎಂ ಪ್ರಶ್ನೆಗೆ ಸಿದ್ದರಾಮಯ್ಯ ಮಾತು

ಜನಸಾಮಾನ್ಯರಿಗೆ ತೆರಿಗೆಯನ್ನು ಹೆಚ್ಚಿಸುತ್ತಿದ್ದಾರೆ. ಜನರ ದುಡ್ಡನ್ನು ಕಿತ್ತು ಅವರಿಗೆ ಕೊಡೋಕೆ ನೀವೇ ಬೇಕಾ? 10 ಕೆ.ಜಿ ಅಕ್ಕಿಯಲ್ಲಿ ಕೇಂದ್ರ ಸರ್ಕಾರದ 5 ಕೆ.ಜಿ ಹೇಳ್ತಾ ಇಲ್ಲ. ಮದ್ಯದ ಮೇಲೆ ತೆರಿಗೆ ಹೆಚ್ಚಿಸಿ ಕೂಲಿ ಕಾರ್ಮಿಕರ ಮನೆ ಹಾಳು ಮಾಡ್ತಾ ಇದ್ದಾರೆ. ಈಗ ಎಲ್ಲಿ ನೋಡಿದ್ರು ಬರಿ ಗಲಭೆಗಳು. ಯಾಕೆ ಬೇರೆ ಸರ್ಕಾರ ಇದ್ದಾಗ ಗಲಭೆಗಳು ಆಗಿಲ್ಲ. ಇವರ ಸರ್ಕಾರದಲ್ಲಿ ಮಾತ್ರ ಯಾಕೆ ಗಲಭೆ ಮಾಡ್ತಾರೆ? ಧರ್ಮ ಧರ್ಮಗಳನ್ನು ಎತ್ತಿ ಕಟ್ಟುತ್ತಾರೆ. ದೇಶದಲ್ಲಿ ನಿಜವಾದ ಜಾತಿವಾದಿಗಳು ಕಾಂಗ್ರೆಸ್‌ನವರು ಎಂದು ತಿಳಿಸಿದರು.

ಕೆಲವು ವರ್ಗಗಳನ್ನು ಓಲೈಸಿಕೊಳ್ಳಲು ಬಿಟ್ಟಿ ಕಾರ್ಯಕ್ರಮ ತಂದಿದ್ದಾರೆ. ದೇಶದ ವಿರುದ್ಧ ಎತ್ತಿಕಟ್ಟಿ ಅವರಿಗೆ ಶಕ್ತಿ ತುಂಬುತ್ತಾ ಇರೋದು ಕಾಂಗ್ರೆಸ್. ಒಬ್ಬೊಬ್ಬ ಮಂತ್ರಿ ಪತ್ರ ಬರೆಯುತ್ತಾನೆ. ಅವರ ಕೇಸ್ ವಾಪಸ್ ತೆಗೆದುಕೊಳ್ಳಿ ಅಂತ. ಕೆಲವೇ ಕೆಲವು ಸಮಾಜಕ್ಕೆ ಸೀಮಿತವಾಗಿ ಈ ಸರ್ಕಾರ ಕೆಲಸ ಮಾಡ್ತಾ ಇದೆ ಆರೋಪಿಸಿದರು. ಇದನ್ನೂ ಓದಿ: ಕಾರಲ್ಲಿ ಕುಳಿತಿದ್ದಾಗಲೇ RSS ಮುಖಂಡ ಹೃದಯಾಘಾತದಿಂದ ಸಾವು

ಸಿದ್ದರಾಮಯ್ಯ ಸರ್ಕಾರ ಓವರ್ ಲೋಡ್ ಆಗಿದೆ. ಈ ಬೋಟ್ ಯಾವಾಗ ಮುಳುಗುತ್ತೆ ಗೊತ್ತಿಲ್ಲ. ಈ ಬೋಟ್‌ನಲ್ಲಿ ಮೊದಲಿಗೆ ಚಲುವರಾಯಸ್ವಾಮಿ. ಜನ ಕೊಟ್ಟ ಅಧಿಕಾರವನ್ನು ಎಷ್ಟಕ್ಕೆ ಮಾರಿಕೊಳ್ಳಬೇಕು ಎನ್ನುವುದೇ ಗೊತ್ತಿರೋದು ಈತನಿಗೆ. ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಲ್ಲಿ ಅತ್ಯಂತ ಭ್ರಷ್ಟಾಚಾರ ಮಾಡ್ತಾ ಇರೋದು ಚಲುವರಾಯಸ್ವಾಮಿ. ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಎರಡನೇ ರ‍್ಯಾಂಕ್. ನಾವು ಬಿಜೆಪಿ ಜೊತೆ ಮೈತ್ರಿಯಾಗಿರೋದೆ ಇಂತಹ ಭ್ರಷ್ಟ ಸರ್ಕಾರ ತೆಗೆಯಲು. ಇಂಥವನು ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್