ರಮೇಶ್‌ ಜಾರಕಿಹೊಳಿ, ಯತ್ನಾಳ್‌ ಉಚ್ಚಾಟನೆಗೆ ಮಾಜಿ ಶಾಸಕ ರೇಣುಕಾಚಾರ್ಯ ಆಗ್ರಹ

Public TV
1 Min Read

– ಯಡಿಯೂರಪ್ಪ ಕಾಲು ಹಿಡಿದು ಮತ್ತೆ ಪಕ್ಷ ಸೇರಿದ್ರು ಯತ್ನಾಳ್‌
– ವಿಜಯೇಂದ್ರ ಬಚ್ಚಾ ಅಲ್ಲ, ನುರಿತ ರಾಜಕಾರಣಿ ಎಂದ ಮಾಜಿ ಶಾಸಕ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ನಿಂದಿಸಿರುವ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ರೇಣುಕಾಚಾರ್ಯ (MP Renukacharya) ತಂಡ ಮುಗಿಬಿದ್ದಿದೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕರಾದ ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಮೇಶ್ ಜಾರಕಿಹೊಳಿ ಹಾಗೂ ಯತ್ನಾಳ್‌ರನ್ನ (Basanagouda Patil Yatnal) ಹೈಕಮಾಂಡ್ ಮುಲಾಜಿಲ್ಲದೇ ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ವಿತರಣೆ

ಯತ್ನಾಳ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಯತ್ನಾಳ್‌ಗೆ ಮೂರು ಮುಖ ಇದೆ. ಉಚ್ಚಾಟನೆಯಾಗಿದ್ದ ಯತ್ನಾಳ್, ಯಡಿಯೂರಪ್ಪ ಕಾಲು ಹಿಡಿದು ಮತ್ತೆ ಪಕ್ಷ ಸೇರಿದ್ರು. ಯಡಿಯೂರಪ್ಪ ಬಗ್ಗೆ ಮಾತಾಡೋಕ್ಕೆ ಅವ್ರಿಗೆ ನೈತಿಕ ಹಕ್ಕಿಲ್ಲ. ಯತ್ನಾಳ್‌ದು ಹರಕು ಬಾಯಿ. ಅವರಿಗೆ ಸಂಸ್ಕಾರವೂ ಇಲ್ಲ, ಸಿದ್ಧಾಂತವೂ ಇಲ್ಲ. ಎಚ್ಚರಿಕೆಯಿಂದ ಮಾತಾಡಲಿ, ಇನ್ಮುಂದೆ ನಾವು ಸಹಿಸಲ್ಲ. ಮುಂದಿನ ವಾರ ಸಭೆ ನಡೆಸಿ ಹೈಕಮಾಂಡ್‌ಗೆ ದೂರು ಕೊಡುವ ತೀರ್ಮಾನ ಮಾಡ್ತೇವೆ ಅಂತ ಕಿಡಿ ಕಾರಿದ್ದಾರೆ.

ವಿಜಯೇಂದ್ರ ಬಚ್ಚಾ ಅಲ್ಲ, ನುರಿತ ರಾಜಕಾರಣಿ. ಅವ್ರೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೀತಾರೆ. ಪಕ್ಷ ಸಂಘಟಿಸಿ ಮತ್ತೆ ಅಧಿಕಾರಕ್ಕೆ ತರ್ತಾರೆ ಅಂತ ರೇಣುಕಾಚಾರ್ಯ ಟಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: 2 ಗ್ಯಾಸ್‌ ಸಿಲಿಂಡರ್‌ ಸ್ಫೋಟ – ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ, ಧಗಧಗಿಸಿದ ಜ್ವಾಲೆ

Share This Article