ಇಟಾನಗರ್: ಕಾಡಾನೆ ದಾಳಿಗೆ ಅರುಣಾಚಲ ಪ್ರದೇಶದ ಮಾಜಿ ಶಾಸಕ ಕಪ್ಚೆನ್ ರಾಜ್‌ಕುಮಾರ್ (Kapchen Rajkumar) ಬಲಿಯಾಗಿರುವ ಘಟನೆ ನಡೆದಿದೆ.
ಮಾಜಿ ಶಾಸಕ ರಾಜ್‌ಕುಮಾರ್ (65) ಅವರು ಇಂದು ಮುಂಜಾನೆ ತಿರಪ್ ಜಿಲ್ಲೆಯ ನಾಮ್ಸಾಂಗ್ ಮತ್ತು ದಿಯೋಮಲಿ ಪ್ರದೇಶಗಳ ನಡುವೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಉತ್ತರ ಭಾರತದ ಹಲವು ರಾಜ್ಯಗಳಿಗೆ ಪ್ರವಾಹ ಎಚ್ಚರಿಕೆ – ಹಿಮಾಚಲ ಪ್ರದೇಶದಲ್ಲಿ ಯೆಲ್ಲೋ ಅಲರ್ಟ್
ನಮ್ಸಾಂಗ್ ಗ್ರಾಮದ ಮಾಜಿ ಹಂಗಾಮಿ ಅಧ್ಯಕ್ಷ ದಿವಂಗತ ವಾಂಗ್ಮೇಯ್ ರಾಜ್‌ಕುಮಾರ್ ಅವರ ಪುತ್ರ ಕಪ್ಚೆನ್ ರಾಜ್‌ಕುಮಾರ್ 1985-1990ರ ಅವಧಿಯಲ್ಲಿ ಹಿಂದಿನ ಖೋನ್ಸಾ ಉತ್ತರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಆರಂಭಿಕ ಶಿಕ್ಷಣವನ್ನು ದೇವಮಾಲಿಯ ನರೋತ್ತಮ್‌ನಗರದ ರಾಮಕೃಷ್ಣ ಮಿಷನ್ ಶಾಲೆಯಲ್ಲಿ ಮತ್ತು ನಂತರ ಖೋನ್ಸಾದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ನವದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಪೈಲಟ್ ತರಬೇತಿ ಕೋರ್ಸ್ ಅನ್ನು ಸಹ ಪಡೆದರು. ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಕಾಡಾನೆ; 2 ಗಂಟೆ ನಿಂತ ರೈಲು – Video ನೋಡಿ..
ಕುಟುಂಬದ ಮೂಲಗಳ ಪ್ರಕಾರ, ಅವರ ಅಂತ್ಯಕ್ರಿಯೆಯನ್ನು ನಾಳೆ ಬೆಳಗ್ಗೆ ಅವರ ಹುಟ್ಟೂರು ನಾಮ್ಸಾಂಗ್‌ನಲ್ಲಿ ನಡೆಸಲಾಗುವುದು.