ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

Public TV
2 Min Read

ಬೆಂಗಳೂರು: ನನಗಾದ ನೋವನ್ನು ನಾನು ಹೇಳಿದ್ದೇನೆ. ಆರ್ ಎಸ್‍ಎಸ್ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಸ್ಪಷ್ಟನೆ ನೀಡಿದ್ದಾರೆ.

ಆರ್ ಎಸ್‍ಎಸ್‍ನ(RSS) ಕಚೇರಿ ಪ್ರವೇಶ ನೀಡದ ವಿಚಾರದ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಸಂಘದ ಕಚೇರಿಯಲ್ಲಲ್ಲ, ಹೆಗ್ಡೆವಾರ್ ಮ್ಯೂಸಿಯಂಗೆ ಹೋದಾಗ ನನಗೆ ಈ ಅನುಭವ ಆಗಿತ್ತು. ಅದಕ್ಕೆ ಈಗಾಗ್ಲೇ ಆರ್‍ಎಸ್‍ಎಸ್ ಅವರೇ ಅಸ್ಪøಶ್ಯತೆ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬಹಳ ಸಂತೋಷ ಆಗುತ್ತಿದೆ. ಆರ್‍ಎಸ್‍ಎಸ್ ಬಗ್ಗೆ ಗೌರವ ಇದೆ ಎಂದು ತಿಳಿಸಿದ್ದಾರೆ.

ಆಗಿದ್ದೇನು..?: ಚುನಾವಣೆಗೂ ಮುನ್ನ ಸದನ ಸಮಿತಿ ಸದಸ್ಯರು ಟ್ರಿಪ್ ಹೋಗಿದ್ದೆವು. ಎಲ್ಲರು ಟ್ರಿಪ್ ಮುಗಿಸಿ ಬೇರೆ ಬೇರೆ ಕಡೆ ತೆರಳಿದ್ರು. ಆದರೆ ನಾನು ನಮ್ಮ ಆರ್‍ಎಸ್‍ಎಸ್‍ನ ಸಂಘ ಅಂತೇಳಿ ಹೆಗ್ಡೆವಾರ್ ಮ್ಯೂಸಿಯಂಗೆ ಹೋದೆ. ಮ್ಯೂಸಿಯಂ ಎಂಟ್ರಿಗೂ ಮುನ್ನ ನಮ್ಮ ಮಾಹಿತಿ ಬರೆಯುವಾಗ ನನ್ನ ಜೊತೆ ಇದ್ದ ವ್ಯಕ್ತಿಗೆ ಒಬ್ಬರು ಹೇಳಿದ್ರು. ಅವರಿಗೆ ಹೇಳಿದ ಹಿನ್ನೆಲೆ ನಾನೇ ಒಳ ಹೋಗದೇ ಅಲ್ಲೇ ಉಳಿದೆ. ಮನಸ್ಸಲ್ಲಿ ಆ ನೋವು ಇನ್ನೂ ಕಾಡುತ್ತಿದೆ. ಹಾಗಾಗಿಯೇ ಆಡಿಯೋ ರಿಲೀಸ್ ಮಾಡಿರುವುದಾಗಿ ತಿಳಿಸಿದರು.

ಸಾಂದರ್ಭಿಕ ಚಿತ್ರ

ಟಿಕೆಟ್ ಸಿಗಲಿಲ್ಲ, ಹಾಗಾಗಿ ಹೀಗೆ ಮಾಡಿದ್ದಾರಾ ಎಂದು ಕೆಲವರು ಹೇಳಿದ್ರು. ಆ ಕಾರಣ ಅಲ್ಲ. ನನಗೆ ಇನ್ನೂ ಘಟನೆ ಬಗ್ಗೆ ನೋವಿದೆ. ದಕ್ಷಿಣ ಕರ್ನಾಟಕದಲ್ಲಿ ಮೊದಲು ಬಿಜೆಪಿಯಲ್ಲಿ ಗೆದ್ದವನು ನಾನು. ಟಿಕೆಟ್ ವಿಚಾರಕ್ಕೆಲ್ಲ ಹೀಗೆಲ್ಲ ಮಾಡಲ್ಲ. ಇಂತಹ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಆಡಿಯೋ ಬಳಿಕ ಅನೇಕರು ಕರೆ ಮಾಡಿದ್ರು. ಅಲ್ಲಿ ಹಾಗಿಲ್ಲ ಅಂತ ಹೇಳಿದ್ರು. ಆದರೆ ನಾನು ನನಗೆ ಆದಂತಹ ಅನುಭವವನ್ನ ಹೇಳಿದೆ. ಅಲ್ಲಿ ಹಾಗಿಲ್ಲ ಅಂದ್ರೆ ಸಂತೋಷವೇ ಎಂದರು.

ನಾನು ಅಲ್ಲಿಂದ ಬಂದಾಗಲೇ ಈ ಬಗ್ಗೆ ತಾಲೂಕಿನ ಕೆಲ ಪ್ರಮುಖರ ಜೊತೆ ಹೇಳಿದ್ದೆ. ತಪ್ಪು ಸಂದೇಶ ನಿಮಗೆ ಕೊಟ್ಟಿದ್ದಾರೆ ಅಂತ ಹೇಳಿದ್ರು. ಸದ್ಯ ನಾನೀಗ ಪಕ್ಷದಲ್ಲಿಲ್ಲ. ಅವರನ್ನ ಪ್ರಶ್ನೆ ಮಾಡೋಕೆ ಆಗಲ್ಲ. ಅವರಿಗೂ ಗೊತ್ತಿಲ್ಲ ಅನ್ನಿಸುತ್ತೆ. ಹೋದವರಿಗೆ ಆದ ಅನುಭವವನ್ನ ನಾನು ಹೇಳಿದ್ದೇನೆ. ಆ ನೋವು ಯಾವಾಗಲೂ ಕಾಡುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಬೇಸರ ವ್ಯಕ್ತಪಡಿಸಿದರು.

Share This Article