ನಾನು ನನ್ನ ತಾಯಿ ಮಗ, ನೀನ್ಯಾರ ಮಗ: ಶ್ರೀನಿವಾಸ್ ವಿರುದ್ಧ ರೇಣುಕಾಚಾರ್ಯ ಕಿಡಿ

Public TV
1 Min Read

-ಮಾಟಮಂತ್ರ ಮಾಡೋ ಎಚ್‍ಡಿಡಿ ಆಂಡ್ ಸನ್ಸ್ ಗೆ ಡಾಕ್ಟರೇಟ್ ಕೊಡ್ಬೇಕು

ದಾವಣಗೆರೆ: ನಾನು ನನ್ನ ತಾಯಿ ಮಗ. ನೀನು ಯಾರ ಮಗ, ಮೇಲಿಂದ ಇಳಿದು ಬಂದಿದ್ದಿಯಾ ಅಥವಾ ನೀನು ದೇವರ ಮಗನಾ ಎಂದು ಏಕವಚದಲ್ಲಿಯೇ ಪ್ರಶ್ನಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು, ಜಿಲ್ಲಾ ಉಸ್ತುವರಿ ಸಚಿವ ಎಸ್.ಆರ್.ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವರು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರೇಣುಕಾಚಾರ್ಯ ಮೇಲಿಂದ ಇಳಿದು ಬಂದಿಲ್ಲ ಅಂತಾ ಹೇಳುತ್ತೀರಿ. ನೀವು ಇಂತಹ ಪೌರುಷ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ತಿರುಗೇಟು ಕೊಟ್ಟ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಇದ್ದೀರಾ? ಅಥವಾ ಮಜಾ ಮಾಡುವುದಕ್ಕೆ ಜಿಲ್ಲೆಗೆ ಬರುತ್ತೀರಾ ಎಂದು ಪ್ರಶ್ನಿಸಿ ಕಿಡಿಕಾರಿದರು.

ನೀನು ಎಷ್ಟು ದಿನಾ ಜಿಲ್ಲಾ ಮಂತ್ರಿಯಾಗಿರುತ್ತಿಯಾ? ನಿಮ್ಮ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೆ ಅಂತಾ ನಾನು ನೋಡುತ್ತೇನೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಯಾವ ಕ್ಷೇತ್ರದಲ್ಲಿ ಪರಿಶೀಲನಾ ಸಭೆ ಮಾಡಿದ್ದಿರಾ ತಿಳಿಸಿ ಎಂದು ಸವಾಲ್ ಹಾಕಿದ್ದಾರೆ.

ಮರಳಿಗಾಗಿ ಪ್ರತಿಭಟನೆ:
ತುಂಗಭದ್ರಾ ನದಿಯಲ್ಲಿ ನಾನೇ ಮುಂದೆ ನಿಂತು ಮರಳನ್ನು ಜನರಿಗೆ ನಾಳೆ ವಿತರಿಸುತ್ತೇನೆ. ಅನಿವಾರ್ಯವಾಗಿ ಜನರಿಗೋಸ್ಕರ ಕಾನೂನು ಉಲ್ಲಂಘನೆ ಮಾಡುತ್ತಿದ್ದೇನೆ. ಮರಳು ನ್ಯಾಯಯುತವಾಗಿ ಸಿಗುವರೆಗೂ ಹೊಳೆಯಲ್ಲಿ ಮಲಗುತ್ತೇನೆ. ತಾಕತ್ತಿದ್ದರೆ ನನ್ನನ್ನು ತಡೆಯಿರಿ, ನಾನು ಜೈಲಿಗೆ ಹೋಗಲು ಸಹ ಸಿದ್ಧ ಎಂದು ಕಿಡಿಕಾರಿದರು.

ಇದೇ ವೇಳೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ ಅವರು, ದೇವಸ್ಥಾನಗಳಿಗೆ ಭೇಟಿ ನೀಡುವುದು, ಜೋತಿಷ್ಯ, ನಿಂಬೆಹಣ್ಣು, ಮಾಟಮಂತ್ರ ಮಾಡುವ ದೇವೆಗೌಡ ಆಂಡ್ ಸನ್ಸ್ ಗೆ ಡಾಕ್ಟರೇಟ್ ಕೊಡಬೇಕು ಎಂದು ವ್ಯಂಗ್ಯವಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *