ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಮಾಜಿ ಸಚಿವ ಅಸ್ನೋಟಿಕರ್ ಓಪನ್ ಚಾಲೆಂಜ್

Public TV
2 Min Read

ಕಾರವಾರ: ಅಂಕೋಲಾದಲ್ಲಿ ಪಾಸ್‍ಪೋರ್ಟ್ ಕಚೇರಿ ಆರಂಭಿಸುತ್ತೇನೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳುತ್ತಿದ್ದಾರೆ. ಅವರಿಂದ ಈ ಕಾರ್ಯ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸವಾಲು ಹಾಕಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಐದು ಬಾರಿ ಸಂಸದರಾಗಿ ಆಯ್ಕೆಯಾದರೂ ಒಮ್ಮೆಯೂ ಜಿಲ್ಲೆಗೆ 5 ಕೋಟಿ ರೂ. ಅನುದಾನದ ಅಭಿವೃದ್ಧಿ ಕಾರ್ಯವನ್ನು ತರಲಿಲ್ಲ. ರಾಮಾಯಣ, ಮಹಾಭಾರತ ಗೊತ್ತಿದೆ ಅಷ್ಟೇ. ಅದನ್ನು ಬಿಟ್ಟರೆ 5 ವರ್ಷ ಮಾಡಿದಂತಹ ಕರ್ಮ ಏನೂ ಇಲ್ಲ. ಆದರೆ ಈಗ ಅಂಕೋಲಾದಲ್ಲಿ ಪಾಸ್‍ಪೋರ್ಟ್ ಕಚೇರಿ ಆರಂಭಿಸುವ ಸುಳ್ಳು ಭರವಸೆಯನ್ನು ನೀಡುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರ ಪೂರ್ಣಗೊಳ್ಳಲು ಇನ್ನು ಸಮಯವಿದೆ. ಸವಲಾಗಿ ಸ್ವೀಕರಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದು ಪಾರ್ಸ್ ಪೋರ್ಟ್ ಕಚೇರಿ ತೆರೆಯಲಿ ಎಂದು ಹೇಳಿದರು.

ಜನಪರ ಕಾಳಜಿ ಇಲ್ಲದ ಇಂತಹವರನ್ನು ರಾಜಕಾರಣದಿಂದಲೇ ಹೊರಗೆ ಹಾಕಬೇಕು. ಪರೇಶ್ ಮೇಸ್ತಾ ಪ್ರಕರಣವನ್ನು ಕೇವಲ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾನೆ. ಜಿಲ್ಲೆಯಲ್ಲಿರುವ ಹಿಂದುಳಿದ 350 ಯುವಕರು ಪರೇಶ್ ಮೇಸ್ತಾ ಗಲಾಟೆಯಲ್ಲಿ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ಪರದಾಡುವಂತಾಗಿದೆ. ಮೃತ ಯುವಕನ ಕುಟುಂಬಕ್ಕೆ ನ್ಯಾಯ ಕೊಡಿಸಲಿಲ್ಲ. ಅನಂತ್ ಕುಮಾರ್ ಭಾಷಣಕ್ಕೆ ಒಳಗಾಗಬೇಡಿ ಎಂದು ಯುವಕರಿಗೆ ಕರೆ ನೀಡಿದರು.

ಅನಂತ್ ಕುಮಾರ್ ಹೆಗ್ಡೆ ಒಟ್ಟು ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಒಮ್ಮೆಯೂ ಜಿಲ್ಲೆಗೆ 5 ಕೋಟಿ ರೂ. ಅನುದಾನದ ಅಭಿವೃದ್ಧಿ ಕಾರ್ಯವನ್ನು ತಂದಿಲ್ಲ. ಈ ಮಧ್ಯೆ ಅಂಕೋಲಾದಲ್ಲಿ ಪಾಸ್‍ಪೋರ್ಟ್ ಕಚೇರಿ ತೆರೆಯುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ಅವರಿಂದ ಅದು ಸಾಧ್ಯವಿಲ್ಲ ಅಂತಾ ಸ್ಪಷ್ಟಪಡಿಸುತ್ತೇನೆ ಎಂದು ನಾನು ಸವಾಲು ಹಾಕಿದ್ದಾರೆ.

ತಾನು ರಾಜಕೀಯ ಮಾಡುವುದಕ್ಕೆ ಬಂದಿದ್ದು, ಸಮಾಜಸೇವೆಗೆ ಅಲ್ಲ ಅಂತಾ ಹೇಳುತ್ತಾನೆ. ಇಂತಹ ನಾಲಾಯಕ್ ಸಂಸದನನ್ನು ಜನರು ಮತ್ತೊಮ್ಮೆ ಆಯ್ಕೆ ಮಾಡಬಾರದು. ರಾಜಕಾರಣಿಗಳು ಇರುವುದೇ ಜನರ ಸೇವೆಗಾಗಿ. ಅದನ್ನು ನಾನು ಮಾಡಲ್ಲ ಅಂತಾ ಹೇಳಿ, ಮತ್ತೆ ತಮ್ಮ ಬುದ್ಧಿಯನ್ನು ತೋರಿಸಿದ್ದಾರೆ ಎಂದು ಆರೋಪಿಸಿದರು.

ಏನು ಬೇಕಾದರೂ ಬರೆದುಕೊಳ್ಳಿ ಅಂತಾ ಮಾಧ್ಯಮಗಳಿಗೆ ಹೇಳುತ್ತಾರೆ. ಹೀಗೆ ಹೇಳಿ ಮಾಧ್ಯಮಗಳನ್ನು ಕೀಳಾಗಿ ಕಾಣುತ್ತಿದ್ದಾರೆ. ಇಂತಹ ಹಲ್ಕಟ್ ರಾಜಕಾರಣಿಯನ್ನು ನಾನು ನೋಡಿಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/GL6-u6xfoSM

Share This Article
Leave a Comment

Leave a Reply

Your email address will not be published. Required fields are marked *