ತುಮಕೂರಿನಲ್ಲಿ ಮಾಜಿ ಮೇಯರ್ ಬರ್ಬರ ಹತ್ಯೆ

Public TV
1 Min Read

ತುಮಕೂರು: ಮಾಜಿ ಮೇಯರ್ ರವಿಕುಮಾರ್ ರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಬಟವಾಡಿ ಬಳಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಬಳಸಿದ್ದ 407 ಟೆಂಪೋ, ಘಟನಾ ಸ್ಥಳದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಅಕ್ಕ-ತಂಗಿ ಕೆರೆಯ ಬಳಿ ಪತ್ತೆಯಾಗಿದೆ. ಅದರಲ್ಲಿ ಒಂದು ಲಾಂಗ್ ಇರುವುದು ಬೆಳಕಿಗೆ ಬಂದಿದೆ.

ಘಟನೆ ವಿವರ:
ಬೆಳ್ಳಂಬೆಳಗ್ಗೆ 8 ಗಂಟೆಗೆ ಟೀ ಕುಡಿಯುವ ವೇಳೆ ಟಾಟಾ ಏಸ್‍ನಲ್ಲಿ ಬಂದ 7 ಜನ ದುಷ್ಕರ್ಮಿಗಳು ರವಿಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ರವಿ ಅವರು ಟೀಯನ್ನು ದುಷ್ಕರ್ಮಿಗಳ ಮುಖದ ಮೇಲೆ ಎರಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅವರು ರವಿಯ ತಲೆಗೆ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹೊಡೆತದ ರಭಸಕ್ಕೆ ರವಿ ತಲೆ ಛಿದ್ರ ಛಿದ್ರವಾಗಿದೆ.

ಈ ಹಿಂದೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ರವಿ, ಕಳೆದ 10 ವರ್ಷ ಜೆಡಿಎಸ್ ಪಕ್ಷ ಕಾರ್ಯಕರ್ತನಾಗಿದ್ದರು. ಕಳೆದ 6 ತಿಂಗಳ ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2015 ರಲ್ಲಿ ಹಟ್ಟಿ ಮಂಜಣ್ಣ ಕೊಲೆ ನಡೆದಿದ್ದು, ಅದರಲ್ಲಿ ರವಿಯ ಕೈವಾಡವಿತ್ತು. ಈ ಹಿನ್ನೆಲೆಯಲ್ಲಿ ಹಟ್ಟಿ ಮಂಜ ಸಹಚರರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಬಟವಾಡಿಯಲ್ಲಿರುವ ಫ್ಲೈಓವರ್‍ನ ಕೆಳಗಡೆ ರವಿಕುಮಾರ್ ಶವ ಅಪಘಾತವಾದ ರೀತಿಯಲ್ಲಿ ಬಿದ್ದಿತ್ತು. ಆದ್ರೆ ಶವ ನೋಡಿ ಇದೊಂದು ಕೊಲೆ ಎಂದು ಹೇಳಲಾಗಿತ್ತು. ಅಪಘಾತವಾದರೆ ಬದಿಯಲ್ಲಿ ಬೀಳಲು ಸಾಧ್ಯವಿಲ್ಲ. ರವಿಕುಮಾರ್ ರೌಡಿಶೀಟರ್ ಆಗಿದ್ದರಿಂದ ಅವರ ಮೇಲೆ ಅನೇಕರು ಕಣ್ಣಿಟ್ಟಿದ್ದರು. ಅಷ್ಟೇ ಅಲ್ಲದೇ ಅವರ ಮೇಲೆ 3-4 ಬಾರಿ ಹಲ್ಲೆ ಪ್ರಯತ್ನಗಳು ಕೂಡ ನಡೆದ್ದಿದ್ದವು. ಹೀಗಾಗಿ ಇದು ಕೊಲೆ ಎಂದು ಹೇಳಲಾಗುತ್ತಿತ್ತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸೀಲನೆ ನಡೆಸಿ ತನಿಖೆ ನಡೆಸಿದ ವೇಳೆ ಟೆಂಪೋ ಪತ್ತೆಯಾಗಿದೆ. ಹೀಗಾಗಿ ಇದು ಕೊಲೆ ಎಂದು ಸ್ಪಷ್ಟವಾಗಿದೆ.

ಈ ಘಟನೆಗೆ ಸಂಬಂಧಪಟ್ಟಂತೆ ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=Vj8oWtMye1E

Share This Article
Leave a Comment

Leave a Reply

Your email address will not be published. Required fields are marked *