ಸೇರ್ಪಡೆಯಾದ 10 ದಿನದಲ್ಲೇ ವೈಎಸ್‌ಆರ್‌ ಕಾಂಗ್ರೆಸ್‌ಗೆ ಅಂಬಟಿ ರಾಯಡು ಗುಡ್‌ಬೈ

Public TV
1 Min Read

ಹೈದರಾಬಾದ್‌: 10 ದಿನದ ಹಿಂದೆ ವೈಎಸ್‌ಆರ್‌ ಕಾಂಗ್ರೆಸ್‌ (YSRC) ಸೇರಿದ್ದ ಅಂಬಟಿ ರಾಯಡು ದಿಢೀರ್‌ (Ambati Rayudu) ಆಗಿ ಪಕ್ಷದಿಂದ ಹೊರ ಬಂದಿದ್ದಾರೆ.

ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದಿಂದ (ವೈಎಸ್‌ಆರ್‌ಸಿಪಿ) ನಿರ್ಗಮಿಸುವುದಾಗಿ ಅಂಬಟಿ ರಾಯಡು ಎಕ್ಸ್‌ನಲ್ಲಿ ಘೋಷಣೆ ಮಾಡಿದ್ದಾರೆ. ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ವಿರಾಮ ತೆಗೆದುಕೊಳ್ಳುತ್ತೇನೆ. ಮುಂದಿನ ಕ್ರಮವನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು ಎಂದು ಅವರು ಬರೆದಿದ್ದಾರೆ.

ಡಿಸೆಂಬರ್‌ 28 ರಂದು ವಿಜಯವಾಡದಲ್ಲಿರುವ ಸಿಎಂ ಕಚೇರಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಮ್ಮುಖದಲ್ಲಿ ರಾಯುಡು ಅವರು ವೈಎಸ್‌ಆರ್‌ಪಿಸಿ ಸೇರಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಋತುವಿನ ನಂತರ ರಾಯುಡು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಅಲ್ಲದೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ದೇಶಕ್ಕಾಗಿ 55 ಏಕದಿನ ಪಂದ್ಯ ಆಡಿರುವ ಅವರು ಅವರು 47.05 ಸರಾಸರಿಯೊಂದಿಗೆ ಒಟ್ಟು 1694 ರನ್ ಹೊಡೆದಿದ್ದಾರೆ.  ಇದನ್ನೂ ಓದಿ: T20 World Cup 2024 ವೇಳಾಪಟ್ಟಿ ಬಿಡುಗಡೆ; ಜೂ.9ಕ್ಕೆ ನ್ಯೂಯಾರ್ಕ್‌ನಲ್ಲಿ ಇಂಡೋ-ಪಾಕ್‌ ಕದನ

Share This Article