ಬೆಂಡೆಕಾಯಿಗೆ ಮತ ಹಾಕಿದ್ರೆ ಭ್ರಷ್ಟರ ಬೆಂಡೆತ್ತುವೆ: ಅನುಪಮಾ ಶೆಣೈ

Public TV
1 Min Read

ಉಡುಪಿ: ಡಿವೈಎಸ್ ಪಿ ಆಗಿದ್ದಾಗ ನಾನು ಅಪರಾಧಿಗಳ ಬೆಂಡೆತ್ತುತ್ತಿದ್ದೆ. ಈಗ ನಾನು ಎಲ್ಲಾ ರಾಜಕೀಯ ಪಕ್ಷಗಳನ್ನು, ಭ್ರಷ್ಟ ರಾಜಕಾರಣಿಗಳನ್ನು ಬೆಂಡೆತ್ತಬೇಕು. ಈ ಕಾರಣಕ್ಕಾಗಿ ಬೆಂಡೆಕಾಯಿ ಚಿಹ್ನೆ ಆಯ್ಕೆ ಮಾಡಲಾಗಿದೆ. ಬೆಂಡೆಕಾಯಿಗೆ ಮತನೀಡಿ ಎಂದು ಅನುಪಮಾ ಶೆಣೈ ಮನವಿ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನನಗೆ ದ್ವೇಷದ ರಾಜಕಾರಣ ಮಾಡುವ ಉದ್ದೇಶವಿಲ್ಲ. ಪರಮೇಶ್ವರ್ ನಾಯಕ್ ನಿಮಿತ್ತ ಮಾತ್ರ. ಕಾಪು ನನಗೆ ಸೇಫರ್ ಝೋನ್. ದುಡ್ಡಿದ್ದು ರಾಜಕೀಯಕ್ಕೆ ಬಂದಿಲ್ಲ. ಮನೆಯ ಮಗಳನ್ನು ಕಾಪುವಿನ ಜನ ಕೈ ಬಿಡಲ್ಲ ಅಂತ ಅಂದುಕೊಂಡಿದ್ದೇನೆ ಎಂದು ಶೆಣೈ ಹೇಳಿದರು. ಇದನ್ನೂ ಓದಿ; ಬಸವ ನಾಡಿನಲ್ಲಿ ಪಕ್ಷದ ಲಾಂಛನ ಬಿಡುಗಡೆ ಮಾಡಿದ ಅನುಪಮಾ ಶೆಣೈ

ನಾನು ರಾಜಕೀಯಕ್ಕೆ ಬರಲು ಕಾಂಗ್ರೆಸ್ ಸರ್ಕಾರ ಪ್ರೇರಣೆ. ಹೆಸರು ಸೆಲೆಕ್ಷನ್ ಕೂಡಾ ಬಹಳ ಚರ್ಚೆ ಮಾಡಿ ಫಿಕ್ಸ್ ಮಾಡಲಾಯ್ತು. ಭಾರತೀಯವೂ ಇದೆ. ಕಾಂಗ್ರೆಸ್ಸೂ ಇದೆ. ಜನ ಎರಡನ್ನೂ ನಮ್ಮ ಪಕ್ಷದಲ್ಲಿ ಕಾಣುತ್ತಾರೆ ಎಂದರು. ಎರಡೂ ಪಕ್ಷದ ಸಜ್ಜನರ ಬೆಂಬಲ ನಮಗೆ ಬೇಕು ಎಂದು ಹೇಳಿದರು.

ತಲಾಖ್ ವಿರುದ್ಧ ಪ್ರಧಾನಿ ಮೋದಿ ಮಾತನಾಡುತ್ತಾರೆ. ಹಾಗಾದ್ರೆ ಹೆಂಡತಿಯನ್ನು ಬಿಟ್ಟ ಮೋದಿಗೂ ಶಿಕ್ಷೆಯಾಗಬೇಕು. ಫೇಸ್ ಬುಕ್ ನಲ್ಲಿ ನಾನು ಪ್ರಧಾನಿಯನ್ನು ಟೀಕಿಸುವುದರ ಬಗ್ಗೆ ಬಹಳ ಚರ್ಚೆಗಳಾಗುತ್ತದೆ ಎಂದು ಹೇಳಿದರು. ದೇಶಕ್ಕೆ ಒಳ್ಳೆದಾಗುತ್ತದೆ ಎಂದು ಹೇಳುವ ಪ್ರಧಾನಿ ಮೋದಿ, ದೇಶದಲ್ಲಿ ಎಲ್ಲರಿಗೂ ಸಮಾನ ಕಾನೂನು ಜಾರಿ ಮಾಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ; ಪ್ರಧಾನಿ ಪತ್ನಿ ತೊರೆದ ವಿರುದ್ಧ ಅನುಪಮಾ ಶೆಣೈ ಸ್ಟೇಟಸ್- ಮೋದಿ ಅಭಿಮಾನಿಗಳು ಗರಂ

ಜಿಲ್ಲೆ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಸ್ವ-ಕ್ಷೇತ್ರಗಳಲ್ಲೇ ಎಲ್ಲಾ ಅಭ್ಯರ್ಥಿಗಳು ಕಣಕ್ಕಿಳಿದರೆ ಉತ್ತಮ ಎಂಬ ಭಾವನೆಯಿದೆ. ನಾನು ಬಳ್ಳಾರಿಯಿಂದ ಸ್ಪರ್ಧಿಸಲ್ಲ ಅಂತ ಮಾಜಿ ಡಿವೈ ಎಸ್ ಪಿ ಅನುಪಮಾ ಹೆಗ್ಡೆ ಘೋಷಣೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *