ಮೋದಿ ಆಗಮನ ಹಿನ್ನೆಲೆ ವೈಮನಸ್ಸು ಮರೆತು ಒಂದಾದ ಬಿಜೆಪಿ ನಾಯಕರು

Public TV
1 Min Read

ಬೆಳಗಾವಿ: ಪ್ರಧಾನಿ ಮೋದಿ (Narendra Modi) ಆಗಮನದಿಂದ ಬೆಳಗಾವಿ ಬಿಜೆಪಿಯಲ್ಲಿ ಹೊಸ ಚೈತನ್ಯ ಬಂದಿದ್ದು, ಪೂರ್ವಸಿದ್ಧತಾ ಸಭೆಯಲ್ಲಿ ವೈಮನಸ್ಸು ಮರೆತು ಬಿಜೆಪಿ (BJP) ನಾಯಕರು ಒಂದಾಗಿದ್ದಾರೆ.

ನಗರದ ಖಾಸಗಿ ರೆಸಾರ್ಟ್‍ನಲ್ಲಿ ಬಿಜೆಪಿ ಎಂಎಲ್‍ಸಿ ಕೇಶವಪ್ರಸಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಕಾಣಿಸಿಕೊಂಡಿದ್ದಾರೆ. ಫೆ.27ರಂದು ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಬೆಳಗಾವಿ ಜಿಲ್ಲಾ ಬಿಜೆಪಿ ಪ್ರಮುಖ ನಾಯಕರಿಂದ ಪೂರ್ವಸಿದ್ಧತಾ ಸಭೆಯಲ್ಲಿ ಬೆಳಗಾವಿ ನಗರ, ಗ್ರಾಮಾಂತರ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಪ್ರಮುಖ ನಾಯಕರು, ಪದಾಧಿಕಾರಿಗಳು ಭಾಗಿಯಾಗಲಿದ್ದರು.

ಅದರಲ್ಲಿ ಪ್ರಮುಖವಾಗಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Laxman Savadi), ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ, ದುರ್ಯೋಧನ ಐಹೊಳೆ ಸೇರಿ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: ಹಾಸನ ಟಿಕೆಟ್‌ ದಂಗಲ್‌ಗೆ ದೊಡ್ಡಗೌಡ್ರ ಎಂಟ್ರಿ – ಹೆಚ್‌ಡಿಕೆ ಕರೆದಿದ್ದ ಸಭೆ ಮುಂದೂಡಿಕೆ

ತಮ್ಮ ತಮ್ಮ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು, ಕಾರ್ಯಕರ್ತರ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಕರೆತರಲು ಪ್ಲಾನ್ ಮಾಡಿದ್ದು ರೋಡ್ ಶೋ ಮಾರ್ಗ ಫೈನಲ್ ಆದ್ರೆ ಅದ್ಧೂರಿ ರೋಡ್ ಶೋಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಕಾರ್ಯಕ್ರಮದ ಯಶಸ್ವಿಗೆ ವೈಮನಸ್ಸು ಮರೆತು ಒಂದಾದ ಬೆಳಗಾವಿ ಬಿಜೆಪಿ ನಾಯಕರು ಚುನಾವಣೆವರೆಗೂ ಇದೇ ಒಗ್ಗಟ್ಟು ಇರುತ್ತಾ ಎಂದು ಜಿಲ್ಲಾ ರಾಜಕೀಯ ವಲಯದಲ್ಲಿ ಗುಸುಗುಸು ಚರ್ಚೆ ಕೂಡ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *