ಮಾಜಿ ಕಾಂಗ್ರೆಸ್ ಶಾಸಕ ವಾಸು ಅನಾರೋಗ್ಯದಿಂದ ನಿಧನ

Public TV
1 Min Read

ಮೈಸೂರು: ಮಾಜಿ ಕಾಂಗ್ರೆಸ್ (Congress) ಶಾಸಕ ವಾಸು (Vasu) (72) ತೀವ್ರ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ.

ಮಾಜಿ ಶಾಸಕ ವಾಸು ಅವರು ಕೆಲ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಮೇಯರ್ ವಾಸು ಎಂದೇ ಖ್ಯಾತರಾಗಿದ್ದರು. ಅಲ್ಲದೇ ಚಾಮರಾಜನಗರ (Chamarajanagar) ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಬಳ್ಳಾರಿಯಲ್ಲಿ ತನಿಖೆ ಚುರುಕು, ಬಾಂಬರ್‌ನಂತೆ ಡ್ರೆಸ್‌ ಹಾಕಿ ಓರ್ವನ ವಿಚಾರಣೆ

ವಿದ್ಯಾವಿಕಾಸ ಎಂಜಿನಿಯರಿಂಗ್ ಕಾಲೇಜು ನಡೆಸುತ್ತಿದ್ದ ಇವರು ಸ್ಥಳೀಯ ಪ್ರಜಾನುಡಿ ಪತ್ರಿಕೆಯನ್ನೂ ನಡೆಸುತ್ತಿದ್ದರು. ಕಳೆದ ವಿಧನಸಭಾ ಚುನಾವಣೆಯಲ್ಲಿ ವಾಸು ಅವರು ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಇದನ್ನೂ ಓದಿ: ರಣಬಿಸಿಲ ನಡುವೆ ದಾಖಲೆಯ ವಿದ್ಯುತ್ ಬಳಕೆ – ಲೋಡ್ ಶೆಡ್ಡಿಂಗ್ ಭೀತಿ

Share This Article