ಯಡಿಯೂರಪ್ಪರಿಗೆ ವಯಸ್ಸಾಗಿದ್ದು, ಅಧಿಕಾರ ಸಿಗುತ್ತೋ ಇಲ್ಲೊ ಎನ್ನುವ ಚಿಂತೆ: ದಿನೇಶ್ ಗುಂಡೂರಾವ್

Public TV
1 Min Read

-ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ

ಚಿತ್ರದುರ್ಗ: ಬಿಜೆಪಿಯವರಿಗೆ ಅಧಿಕಾರವಿಲ್ಲದೇ ಇರಲು ಆಗುತ್ತಿಲ್ಲ. ಆ ಯಡಿಯೂರಪ್ಪರಿಗೆ ವಯಸ್ಸಾಗಿದ್ದು, ಮತ್ತೆ ಜೀವನದಲ್ಲಿ ಅಧಿಕಾರ ಸಿಗುತ್ತೋ ಇಲ್ಲವೋ ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ. ಹೀಗಾಗಿ ಅಧಿಕಾರ ಪಡೆಯಲೇಬೇಕೆಂದು ಕಾಂಗ್ರೆಸ್ಸಿಗರ ಮೇಲೆ ಐಟಿ ರೈಡ್, ಬ್ಲಾಕ್ಮೇಲ್ ಹಾಗೂ ಶಾಸಕರಿಗೆ ಅಧಿಕಾರದ ಆಸೆ ಆಮಿಷ ಒಡ್ಡುತ್ತಿದ್ದಾರೆ. ಬಿಜೆಪಿಯವರಿಗೆ ಯಾವುದೇ ಸಿದ್ದಾಂತವಿಲ್ಲ. ಅಧಿಕಾರಕ್ಕಾಗಿ ತಾತ್ವಿಕ ವಿರೋಧಿಗಳೊಂದಿಗೆ ಕೈ ಜೊಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರಸಭೆ ಚುನಾವಣೆ ನಿಮಿತ್ತ ಕೋಟೆನಾಡಿಗೆ ಆಗಮಿಸಿದ್ದ ದಿನೇಶ್ ಗುಂಡೂರಾವ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಎರಡು ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿರೋ ಕಾಂಗ್ರೆಸ್ ಸಚಿವರನ್ನ ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಲಾಗುವುದು. ನಮಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿ ಅಗ್ರ ಸ್ಥಾನದಲ್ಲಿರಲಿದೆ. ಬೇರೆ ಬೇರೆ ಕಾರಣಗಳಿಂದ ಜನ ನಮಗೆ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕದೇ ಇರಬಹುದು. ಆದರೆ ನಮ್ಮ ಸರ್ಕಾರ ಕೆಲಸ ಮಾಡಿಲ್ಲ ಅಂತ ಕಾಂಗ್ರೆಸ್ಸನ್ನ ಸೋಲಿಸಿಲ್ಲ. ನಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರವು ಹಗರಣ ರಹಿತ ಮತ್ತು ಅಭಿವೃದ್ಧಿ ಪರ ಸರ್ಕಾರ ನೀಡಿರುವ ಹೆಗ್ಗಳಿಕೆ ನಮಗಿದ್ದೂ, ನಗರಸಭೆ ಚುನಾವಣೆಯಲ್ಲಿ ಮತದಾರ ಬಳಿ ಕಾಂಗ್ರೆಸ್ ತೆರಳಲು ಮುಜುಗರವಿಲ್ಲ ಅಂತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಸೋಲಿಗೆ ಸ್ಪಷ್ಟನೆ ನೀಡಿದರು.

ನಾವು ಜೆಡಿಎಸ್ ಗೆ ಸರ್ಕಾರ ರಚಿಸಲು ಭೇಷರತ್ ಬೆಂಬಲ ಕೊಟ್ಟಿದ್ದೂ, ಸಿಎಂ ಕುಮಾರಸ್ವಾಮಿ ಬದಲಾವಣೆ ಅವರ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಹಲವು ಜನ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದು ಮುಂದಿನ ತಿಂಗಳು ಸಚಿವ ಸಂಪುಟ ವಿಸ್ತರಣೆ ಮಾಡುವ ಮೂಲಕ ಹೊಸಬರಿಗೆ ಅವಕಾಶ ಕಲ್ಪಿಸುತ್ತೇವೆ. ಅಲ್ಲದೇ ಸರ್ಕಾರದಲ್ಲಿ ಸಣ್ಣ, ಪುಟ್ಟ ಸಮಸ್ಯೆಗಳಿದ್ದು. ಕಳೆದ ಅವಧಿಯಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದಾಗಲೇ ನಮ್ಮಲ್ಲಿ ಸಮಸ್ಯೆ ಇತ್ತು. ಈಗ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ವಿರೋಧಿಗಳಾಗಿದ್ದ ಜೆಡಿಎಸ್ ,ಕಾಂಗ್ರೆಸ್ ಪಕ್ಷಗಳ ನಡುವೇ ಹೊಂದಾಣಿಕೆಯಾಗಲು ಸಮಯವಕಾಶ ಬೇಕಾಗಿದೆ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರದೊಳಗಿನ ಭಿನ್ನಾಭಿಪ್ರಾಯವನ್ನ ಹೊರಹಾಕಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *