ವಿಧಾನಸಭೆಯ ಲಾಸ್ಟ್ ಬೆಂಚ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ ಶಿಫ್ಟ್!

Public TV
1 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಕೊನೆಯ ಬೆಂಚ್ ಗೆ ಶಿಫ್ಟ್ ಆಗಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿಂದೆ ಕೂತು ಇರಿಸು ಮುರಿಸು ಅನುಭವಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇವತ್ತು ವಿಧಾನಸಭೆಯಲ್ಲಿ ಲಾಸ್ಟ್ ಬೆಂಚ್‍ಗೆ ಶಿಫ್ಟ್ ಆಗಿದ್ದಾರೆ. ಸಿದ್ದರಾಮಯ್ಯ ಸೋಮವಾರ ಕೂಡ ವಿಧಾನ ಸಭೆಯಲ್ಲಿ 2ನೇ ಸಾಲಿನಲ್ಲಿ ಕುಳಿತಿದ್ದರು.

ಈ ಸಂಬಂಧ ಮಾಧ್ಯಮಗಳು ವರದಿ ಮಾಡಿತ್ತು. ಇದರಿಂದ ಮುಜುಗರಕ್ಕೆ ತುತ್ತಾದ ಸಿದ್ದರಾಮಯ್ಯ ಇವತ್ತು ಹೋಗಿ ಕೊನೆಯ ಸಾಲಿನಲ್ಲಿ ಕುಳಿತ್ತಿದ್ದಾರೆ ಎನ್ನಲಾಗಿದೆ.

ಶಾಸಕರಾಗಿದ್ದಾಗ ರಮೇಶ್ ಕುಮಾರ್ ಈ ಹಿಂದೆ ಕುಳಿತುಕೊಳ್ಳುತ್ತಿದ್ದ ಆಸನದಲ್ಲಿ ಸಿದ್ದರಾಮಯ್ಯ ಹೋಗಿ ಆಸೀನರಾಗಿದ್ದಾರೆ. ಆದರೂ ಸಿದ್ದರಾಮಯ್ಯಗೆ ಡಿಮ್ಯಾಂಡ್ ಏನು ಕಮ್ಮಿ ಆಗಲಿಲ್ಲ. ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯರನ್ನು ಸುತ್ತುವರಿದಿದ್ದ ದೃಶ್ಯ ವಿಧಾನಸಭೆಯಲ್ಲಿ ಕಂಡು ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *