ಸಿದ್ದರಾಮಯ್ಯ ಬೆಂಗಾವಲು ವಾಹನಕ್ಕೆ ಹಿಂದಿನಿಂದ ಡಿಕ್ಕಿ – ಸರಣಿ ಅಪಘಾತ

Public TV
1 Min Read

ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭದ್ರತೆ ನೀಡುತ್ತಿದ್ದ ಬೆಂಗಾವಲು ವಾಹನ ಜಿಲ್ಲೆಯ ಶ್ರೀರಂಗಪಟ್ಟಣದ ಗೌಡಹಳ್ಳಿ ಬಳಿ ಅಪಘಾತವಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಒಂದರ ಹಿಂದೆ ಒಂದರಂತೆ ನಾಲ್ಕು ವಾಹನಗಳಿಗೆ ಸರಣಿ ಅಪಘಾತವಾಗಿದೆ. ಮೊದಲಿಗೆ ಸಿದ್ದರಾಮಯ್ಯ ಅವರನ್ನು ಫಾಲೋ ಮಾಡುತ್ತಿದ್ದ ಕಾರಿಗೆ ಸಣ್ಣದಾಗಿ ಅಪಘಾತ ಸಂಭವಿಸಿದೆ. ಬಳಿಕ ಬೇರೆ ಕಾರುಗಳು ಸೇರಿದಂತೆ ನಾಲ್ಕು ವಾಹನಗಳಿಗೆ ಅಪಘಾತ ಸಂಭವಿಸಿದೆ.

ಸಿದ್ದರಾಮಯ್ಯನವರು ಇಂದು ಮೈಸೂರಿಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಆದರೆ ಈ ಅಪಘಾತದಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಎಲ್ಲ ವಾಹನಗಳಿಗೆ ಸಣ್ಣಪುಟ್ಟ ಡ್ಯಾಮೇಜ್ ಆಗಿದೆ. ಹೆದ್ದಾರಿಯಲ್ಲಿ ತಕ್ಷಣ ಬ್ರೇಕ್ ಹಾಕಿದ್ದರಿಂದ ಬೇರೆ ಸರಣಿ ಅಪಘಾತವಾಗಿದೆ ಎಂದು ಹೇಳಲಾಗುತ್ತದೆ.

ಈ ಘಟನೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *