ಮಗನ ಮದುವೆ ಸಿದ್ಧತೆ ಬ್ಯುಸಿ- ಕಲಾಪಕ್ಕೆ ಹೆಚ್‍ಡಿಕೆ ಗೈರು

Public TV
1 Min Read

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ಪುತ್ರನ ಮದುವೆ ಸಿದ್ಧತಾ ಬ್ಯುಸಿಯಲ್ಲಿ ಇದ್ದಾರೆ. ಮುಂದಿನ ತಿಂಗಳು ಪುತ್ರ ನಿಖಿಲ್ ಮದುವೆ ಇದ್ದು, ಆ ಮದುವೆ ಸಿದ್ಥತೆಯಲ್ಲಿ ಹೆಚ್ಚು ಮಗ್ನರಾಗಿದ್ದಾರೆ ಎನ್ನಲಾಗಿದೆ. ಹಾಗಾಗಿ ವಿಧಾನಸಭೆ ಅಧಿವೇಶನದಲ್ಲಿ ಹೆಚ್ಚು ಕಾಣಿಸಿಕೊಳ್ಳದೆ, ಚರ್ಚೆಯಲ್ಲಿಯೂ ಭಾಗವಹಿಸದಿರೋದು ಗಮನಸೆಳೆಯುತ್ತಿದೆ.

ಅಂದಹಾಗೆ ಇಲ್ಲಿಯವರೆಗೆ ಹೆಚ್‍ಡಿಕೆ ಎರಡು ದಿನ ಮಾತ್ರ ಕಾಣಿಸಿಕೊಂಡಿದ್ದಾರೆ. ಬಜೆಟ್ ದಿನವೂ ಆಗಮಿಸಿದ್ದ ಹೆಚ್‍ಡಿಕೆ ಸ್ವಲ್ಪ ಕಾಲ ಮಾತ್ರ ಸದನದಲ್ಲಿ ಇದ್ದರು. ಯಡಿಯೂರಪ್ಪ ಬಜೆಟ್ ಭಾಷಣದ ಅರ್ಧದಲ್ಲೇ ಹೊರನಡೆದಿದ್ದ ಕುಮಾರಸ್ವಾಮಿ, ಬಜೆಟ್ ಭಾಷಣ ಮುಗಿಯುವ ಮೊದಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ವಿಧಾನ ಸೌಧದಿಂದ ಹೊರಟು ಹೋಗಿದ್ದರು.

ಶುಕ್ರವಾರದಿಂದ ಸಂವಿಧಾನದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗ್ತಿದೆ. ಈ ಚರ್ಚೆಯಲ್ಲಿ ಎಲ್ಲ ಪಕ್ಷಗಳ ಶಾಸಕರು ಕೂಡ ಭಾಗವಹಿಸಿದ್ದಾರೆ. ಆದರೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮಾತ್ರ ಸಂವಿಧಾನ ಚರ್ಚೆಯಲ್ಲಿ ಇದುವರೆಗೂ ಭಾವಗಹಿಸಿಲ್ಲ. ಸಹಜವಾಗಿಯೇ ಈ ವಿಚಾರ ವಿಧಾನಸಭೆ ಮೊಗಸಾಲೆಯಲ್ಲಿ ಚರ್ಚೆಯಾಗ್ತಿದ್ದು, ಕುಮಾರಸ್ವಾಮಿ ಪುತ್ರನ ಮದುವೆಯ ಸಿದ್ಧತೆಯ ಬ್ಯುಸಿಯಲ್ಲಿ ಇರಬೇಕು ಅಂತ ಕೆಲ ಶಾಸಕರುಗಳ ನಡುವೆ ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *