ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಒಗ್ಗಟ್ಟು ತೋರಿಸಬೇಕು: ಹೆಚ್‌ಡಿಕೆ

Public TV
1 Min Read

ಬೆಂಗಳೂರು: ನಾವು ಗೆದ್ದು ಬಿಡ್ತೀವಿ ಅಂತಾ ಹೇಳುತ್ತಿಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಒಗ್ಗಟ್ಟು ತೋರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದರು.

ರಾಜ್ಯಸಭಾ ಚುನಾವಣೆಗೆ ಇಂದು (ಮಂಗಳವಾರ) ಮತದಾನ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಅವರು, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋದಕ್ಕಿಂತ ಒಗ್ಗಟ್ಟು ತೋರಿಸಬೇಕು. ಈ ಮೂಲಕ ಅಭ್ಯರ್ಥಿ ಹಾಕಿದ್ದೀವಿ. ನೋಡೋಣ ಗೆಲ್ತೀವಾ ಅಂತ ಎಂದು ತಿಳಿಸಿದರು. ಈ ವೇಳೆ ಶರಣು ಕುಂದಕೂರು ಹೆಸರು ಕೇಳುತ್ತಾ ಇದ್ದಂತೆ ಕೆಂಡಾಮಂಡಲರಾದರು. ಇದನ್ನೂ ಓದಿ: ಇಂದು ರಾಜ್ಯಸಭೆ ಹೈವೋಲ್ಟೇಜ್ ಕದನ- ವಿಧಾನಸೌಧದಲ್ಲಿ ಸಿದ್ಧತೆ ಹೇಗಿದೆ?

ರಾಜ್ಯಸಭಾ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮಾತನಾಡಿ, ನಾನು ಪ್ರತಿಯೊಬ್ಬರಿಗೂ ಮತ ಕೇಳಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಮತ ಕೇಳೋಕೆ ಅವಕಾಶ ಇದೆ. ಎಲ್ಲಾ ಪಕ್ಷದವರನ್ನ ಕೇಳಿದ್ದೇನೆ. ಮತ ತೋರಿಸಿ ಹಾಕಬೇಕು. ಏನ್ ಆಗುತ್ತೋ ನೋಡೋಣ ಎಂದು ತಿಳಿಸಿದರು.

ಶಾಸಕ ಹೆಚ್.ಡಿ.ರೇವಣ್ಣ ಮಾತನಾಡಿ, ಸಮಾನ ಮನಸ್ಕರು ಕುಪೇಂದ್ರ ರೆಡ್ಡಿಗೆ ಮತ ಹಾಕ್ತಾರೆಂಬ ನಂಬಿಕೆಯಿಂದ. ಕುಪೇಂದ್ರ ರೆಡ್ಡಿ ನಿಂತಿದ್ದಾರೆ. ಅವರಿಗೆ ಒಳ್ಳೇದಾಗುತ್ತೆ. ಎಷ್ಟು ಆತ್ಮಸಾಕ್ಷಿ ಮತಗಳು ಬರ್ತವೆ ಅಂತ ನಾನು ಹೇಳಲ್ಲ. ಒಂಬತ್ತು ತಿಂಗಳಿಂದ ಏನೂ ಕೆಲಸ ಆಗಿಲ್ಲ. ನಮಗೆ ಮತ ಹಾಕಿ ಅಂತ ಕಾಂಗ್ರೆಸ್‌ನವ್ರಿಗೆ ಕೇಳಿದ್ದೀವಿ ಎಂದರು. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ಸಂಸದೆ ಸುಮಲತಾಗೆ ಶುಭ ಸೂಚನೆ

Share This Article