ವಿಶ್ರಾಂತಿಗೆ ತೆರಳಿದ ಹೆಚ್‌.ಡಿ.ಕುಮಾರಸ್ವಾಮಿ ಕುಟುಂಬ

By
1 Min Read

ಬೆಂಗಳೂರು: ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಅವರ ಕುಟುಂಬ ಸಮೇತರಾಗಿ ರೆಸಾರ್ಟ್‌ಗೆ ವಿಶ್ರಾಂತಿಗೆ ತೆರಳಿದೆ.

ಹೌದು, ಆರೆಂಜ್‌ ಕೌಂಟಿ ರೆಸಾರ್ಟ್‌ ಕಬಿನಿ ಹಿನ್ನೀರಿನಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ವಿಶ್ರಾಂತಿಗೆ ತೆರಳಿದ್ದಾರೆ. 2 ದಿನಗಳ ಕಾಲ ವಿಶ್ರಾಂತಿಗೆ ಹೋಗಿದ್ದಾರೆ ಎನ್ನಲಾಗಿದೆ.

ಪತ್ನಿ, ಪುತ್ರ, ಸೊಸೆ, ಮೊಮ್ಮಗನ ಜೊತೆ ರೆಸ್ಟ್‌ಗೆ ಹೋಗಿದ್ದು, ನಾಳೆ ಅಥವಾ ನಾಡಿದ್ದು ವಾಪಸ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಒಂದು ಕಡೆ ಪ್ರಜ್ವಲ್ ರೇವಣ್ಣ ಬಂಧನವಾಗಿದ್ದರೆ, ಮತ್ತೊಂದು ಕಡೆ ಬಸವನಗುಡಿ ಹೆಚ್‌.ಡಿ.ರೇವಣ್ಣ ನಿವಾಸ ಖಾಲಿ ಖಾಲಿಯಾಗಿದೆ. ಮಾಜಿ ಸಚಿವರ ನಿವಾಸದಲ್ಲಿ ಸದ್ಯ ಯಾರೂ ಇಲ್ಲ. ಇಂದು ಪುತ್ರ ಮತ್ತು ಪತ್ನಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಏನಾಗುತ್ತೋ ಎನ್ನುವ ಚಿಂತೆಯಲ್ಲಿ ರೇವಣ್ಣ ಇದ್ದಾರೆ ಎನ್ನಲಾಗಿದೆ. ಬಸವನಗುಡಿ ನಿವಾಸದಲ್ಲಿ ರೇವಣ್ಣ ಸದ್ಯಕ್ಕೆ ಇಲ್ಲ. ಎಲ್ಲಾ ಬೆಳವಣಿಗೆಗಳನ್ನು ಅಜ್ಞಾತ ಸ್ಥಳದಲ್ಲೇ ಗಮನಿಸುತ್ತಿದ್ದಾರೆ.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ ಭೀತಿಯಲ್ಲಿದ್ದ ಸಂಸದ ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಭಾರತಕ್ಕೆ ವಾಪಸ್‌ ಆದ ಅವರನ್ನು ಏರ್‌ಪೋರ್ಟ್‌ನಲ್ಲೇ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಜ್ವಲ್‌ ತಡರಾತ್ರಿ ವಾಪಸ್‌ ಆಗಿದ್ದರು. ಈ ವೇಳೆ ಎಸ್‌ಐಟಿ ಅಧಿಕಾರಿಗಳು ಏಪೋರ್ಟ್‌ನಲ್ಲೇ ಮೊಕ್ಕಂ ಹೂಡಿದ್ದರು. ಆರೋಪಿ ಬಂದ ತಕ್ಷಣ ಬಂಧನಕ್ಕೊಳಪಡಿಸಿದ್ದಾರೆ. ಇಂದು ವೈದ್ಯಕೀಯ ಪರೀಕ್ಷೆ ನಡೆಸಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.

Share This Article