ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಸಲೀಂ ಮೇಲೆ ಕ್ರಮ ಕೈಗೊಂಡ್ರು: ಜಗದೀಶ್ ಶೆಟ್ಟರ್

Public TV
3 Min Read

– ಡಿಕೆಶಿ ಒಬ್ಬ ಅಸಹಾಯಕ ಅಧ್ಯಕ್ಷ
– ಸಿದ್ದರಾಮಯ್ಯ ನಡವಳಿಕೆ ಸರಿಯಿಲ್ಲ

ಹಾವೇರಿ: ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮೇಲೆ ಕ್ರಮ ಕೈಗೊಳ್ಳುವ ಧಮ್ ಡಿಕೆ ಶಿವಕುಮಾರ್ ಅವರಿಗಿಲ್ಲ. ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಸಲೀಂ ಮೇಲೆ ಕ್ರಮ ಕೈಗೊಂಡರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ವರ್ಸಸ್ ಡಿಕೆಶಿ ಫೈಟಿಂಗ್ ಶುರುವಾಗಿದೆ. ಸಲೀಂ ಮತ್ತು ಉಗ್ರಪ್ಪರ ನಡುವಿನ ಸಂಭಾಷಣೆಯೆ ಇದಕ್ಕೆ ಸಾಕ್ಷಿ. ಡಿಕೆಶಿ ರಾಜ್ಯದ ಅಧ್ಯಕ್ಷರು, ಆದರೆ ಅಧ್ಯಕ್ಷರ ತಕ್ಕಡಿ ಮೇಲೇಳ್ತಿಲ್ಲ ಅಂದರು. ಉಗ್ರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯರ ಪಟ್ಟದ ಶಿಷ್ಯ. ಉಗ್ರಪ್ಪ ಮೇಲೆ ಕ್ರಮ ಕೈಗೊಳ್ಳೋ ಧಮ್ ಡಿಕೆಶಿಗಿಲ್ಲ. ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಸಲೀಂ ಮೇಲೆ ಕ್ರಮ ಕೈಗೊಂಡರು. ಸಲೀಂ ಬಹಳ ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದವರು. ಉಗ್ರಪ್ಪ ಮೇಲೆ ಕ್ರಮ ಕೈಗೊಂಡರೆ ಆರ್ಟಿಕಲ್ಸ್ ಸ್ಟಾರ್ಟ್ ಮಾಡ್ತಾರೆ ಅಂತಾ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದರು.

ಪಂಜಾಬನಲ್ಲೊಬ್ಬ ಸಿದ್ದು, ರಾಜ್ಯದಲ್ಲೊಬ್ಬ ಸಿದ್ದು ಇದ್ದಾರೆ. ಇಬ್ಬರು ಸಿದ್ದುಗಳ ಜಟಾಪಟಿಯಿಂದ ಕಾಂಗ್ರೆಸ್ ಅವನತಿ ಆಗ್ತಿದೆ. ಪಂಜಾಬ್‍ನಲ್ಲಿ ಕಾಂಗ್ರೆಸ್ ನಗೆಪಾಟಲಿಗೆ ಈಡಾಗಿದೆ. ಇಲ್ಲೂ ಅದೇ ಪರಿಸ್ಥಿತಿ ಇದೆ. ಡಿಕೆಶಿ ಒಬ್ಬ ಅಸಹಾಯಕ ಅಧ್ಯಕ್ಷ. ಎಲ್ಲವೂ ಸಿದ್ದರಾಮಯ್ಯರ ಕೈಯಲ್ಲಿದೆ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದವರು. ಆದರೆ ಅವರ ನಡವಳಿಕೆ ಸರಿಯಿಲ್ಲ. ಅನೇಕ ಭಾಗ್ಯಗಳನ್ನ ಕೊಟ್ಟಿದ್ದೇವೆ ಅಂದವರು ಅಧಿಕಾರ ಕಳೆದುಕೊಂಡರು. ಚಾಮುಂಡೇಶ್ವರಿಯಲ್ಲೂ ಸೋಲು ಕಂಡರು. ಭಾಗ್ಯಗಳ ಹೆಸರೇಳಿ ದುರುಪಯೋಗ ಮಾಡಿಕೊಂಡರೆ ಹೊರತು, ಭಾಗ್ಯಗಳು ಜನರಿಗೆ ಸಿಗ್ಲಿಲ್ಲ. ಹೀಗಾಗಿ ಸೋಲು ಕಂಡರು ಎಂದು ವಾಗ್ದಾಳಿ ನಡೆಸಿದರು.

ಎರಡೂ ಚುನಾವಣೆಗಳಲ್ಲಿ ಗೆಲ್ಲೋದಿಲ್ಲ ಅನ್ನೋದು ಕಾಂಗ್ರೆಸ್ ನವರಿಗೆ ಗೊತ್ತಾಗಿದೆ. ಹೀಗಾಗಿ ಡಿಕೆಶಿ ಹಣ ಹಂಚಿಕೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ. ಸಿಂದಗಿಯಲ್ಲೂ ಸಿದ್ದರಾಮಯ್ಯ ಹಣ ಹಂಚಿಕೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದರು. ಹಣ, ಹೆಂಡ ಹಂಚೋದು, ಗೂಂಡಾಗಿರಿ ಮಾಡೋದು ಕಾಂಗ್ರೆಸ್ ಸಂಸ್ಕೃತಿ. ನಮಗೆ ಲಕ್ಷಾಂತರ ಸಂಖ್ಯೆಯ ಕಾರ್ಯಕರ್ತರಿದ್ದಾರೆ. ನಮಗೆ ರೊಕ್ಕ ಹಂಚೋ ಸಂಸ್ಕೃತಿ ಇಲ್ಲ. ಸೋತ ಮೇಲೆ ಯಾಕೆ ಸೋಲಾಯ್ತು ಅನ್ನೋದಕ್ಕೆ ರೊಕ್ಕ ಹಂಚ್ತಿದ್ದಾರೆ ಅನ್ನೋದು ಹೇಳ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದ್ದಾರೆ. ಸಾಕಷ್ಟು ಜನ ಅಲ್ಪಸಂಖ್ಯಾತರು ಬಿಜೆಪಿ ಪರವಾಗಿ ವೋಟು ಹಾಕಲಿದ್ದಾರೆ. ಪ್ರತಿಪಕ್ಷದವರು ಭ್ರಮೆಯಲ್ಲಿದ್ದಾರೆ. ನೀವು ಅಧಿಕಾರಕ್ಕೆ ಬರಬೇಕು ಎಂಬ ಕನಸು ನನಸಾಗೋದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಟಿ ಬಸ್ ಏರಿದ ಸಿಎಂ ಸ್ಟಾಲಿನ್ – ಪ್ರಯಾಣಿಕರು ಫುಲ್ ಶಾಕ್

ಸಿದ್ದರಾಮಯ್ಯ ಡಿಕೆಶಿ ಇಬ್ಬರು ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರೋ ಹಡಗು. ನರೇಂದ್ರ ಮೋದಿ ಯಾವುದೇ ಭ್ರಷ್ಟಾಚಾರ ಇಲ್ಲದೆ ಅಧಿಕಾರ ಮಾಡುತ್ತಿದ್ದಾರೆ. ಮೋದಿ ನಾಯಕತ್ವದಲ್ಲಿ ಎರಡು ಬಾರಿ ಕೊರೋನಾ ನಿಭಾಯಿಸಿದ್ದಾರೆ. ಮುಂದುವರಿದ ದೇಶದಲ್ಲಿ ನಿಯಂತ್ರಣ ಮಾಡುವಲ್ಲಿ ತೊಂದರೆ ಅನುಭವಿಸಿದ್ದಾರೆ. ವಾಕ್ಸಿನ್ ಉತ್ಪಾದನೆ ಹೆಚ್ಚು ಒತ್ತು ನೀಡಿ, 130 ಕೋಟಿ ಜನರಿಗೆ ವಾಕ್ಸಿನ್ ಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ED ನನ್ನ ಮೇಲೆ ದಾಳಿ ಮಾಡುವುದಿಲ್ಲ, ನಾನು BJP ಸಂಸದ: ಸಂಜಯ್ ಪಾಟೀಲ್

ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಮತಯಾಚನೆ ಕುರಿತು ಪ್ರತಿಕ್ರಿಯಿಸಿ, ಹಾನಗಲ್ ಮತ್ತು ಸಿಂದಗಿ ಪ್ರಚಾರ ಮಾಡಿದ್ದೇನೆ. ಒಳ್ಳೆಯ ವಾತಾವರಣ ಇದೆ. ನಮ್ಮ ಅಭ್ಯರ್ಥಿ ಎರಡು ಬಾರಿ ಶಾಸಕರಾಗಿದ್ದಾರೆ. ಹಾನಗಲ್ ಮತಕ್ಷೇತ್ರ ಉದಾಸಿ ಕ್ಷೇತ್ರ. 6 ಭಾರಿ ಶಾಸಕ, ಲೋಕೋಪಯೋಗಿ ಸಚಿವರಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಸಂಸದ ಶಿವಕುಮಾರ ಉದಾಸಿ ಮೂರು ಬಾರಿ ಆಯ್ಕೆ ಯಾಗಿ ಅಭಿವೃದ್ಧಿ ಮಾಡಿದ್ದಾರೆ. ಇಡೀ ಹಾವೇರಿ ಜಿಲ್ಲೆ ಬಿಜೆಪಿಯ ಗಟ್ಟಿ ನೆಲೆಯಾಗಿದೆ. ನಮ್ಮ ಅಭ್ಯರ್ಥಿ ಶಿವರಾಜ್ ಸಜ್ಜನರ್ ಶಾಸಕ, ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಯ ನಾಡಿಮಿತ ಶಿವರಾಜ್ ಸಜ್ಜನರ್ ಗೊತ್ತಿದೆ. ಅತಿಹೆಚ್ಚು ಅಂತರದಲ್ಲಿ ಇಬ್ಬರು ಅಭ್ಯರ್ಥಿಗಳು ಗೆಲುವು ಪಡೆಯುತ್ತಾರೆ ಎಂದರು. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

ಈಗಾಗಲೇ 100 ಕೋಟಿ ಜನರಿಗೆ ವಾಕ್ಸಿನೇಷನ್ ನೀಡಲಾಗುತ್ತದೆ. ಸಿದ್ದರಾಮಯ್ಯ ಟೀಕೆ ಮಾಡುವುದು, 100 ಕೋಟಿ ಜನರಿಗೆ ಲಸಿಕೆ ಹಾಕಿದರೂ, ಟೀಕೆ ಮಾಡಿದರು. ಇದು ರಾಜಕೀಯ ಪಕ್ಷ ಹಾಗೂ ರಾಜಕೀಯ ನಾಯಕರಿಗೆ ಶೋಭೆ ತರವುದಿಲ್ಲ. ಕಾಂಗ್ರೆಸ್ ನಾಯಕ ಶಶಿತರೂರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *