ಡಿನೊಟಿಫೈ ಕೇಸಲ್ಲಿ ಶನಿವಾರ ಬಿಎಸ್‍ವೈ ಬೇಲ್ ಭವಿಷ್ಯ

Public TV
1 Min Read

ಬೆಂಗಳೂರು: ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಅಕ್ರಮ ಡಿನೋಟಿಫೈ ಪ್ರಕರಣದ ಆರೋಪಿ ಮಾಜಿ ಸಿಎಂ ಯಡಿಯೂರಪ್ಪ ಜಾಮೀನು ಕೋರಿ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಶುಕ್ರವಾರ ಖುದ್ದಾಗಿ ಸಿಟಿ ಸಿವಿಲ್ ಕೋರ್ಟ್‍ನಲ್ಲಿರುವ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಕೋರ್ಟ್‍ಗೆ ಆಗಮಿಸಿದ ಬಿಎಸ್‍ವೈ ಜಾಮೀನು ಕೋರಿದ್ದಾರೆ. ಈ ಅರ್ಜಿಯನ್ನು ಮಾನ್ಯ ಮಾಡಿರುವ ಕೋರ್ಟ್, ಶನಿವಾರ ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಕೋವಿಡ್‌ ನಂತ್ರ ಸೋನಿಯಾ ಗಾಂಧಿ ಶ್ವಾಸಕೋಶದಲ್ಲಿ ಫಂಗಲ್ ಇನ್ಫೆಕ್ಷನ್

ಇತ್ತ ಅವ್ಯವಹಾರ ಆರೋಪದ ಮೇಲೆ ಜೋಧ್‍ಪುರದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಸಹೋದರ ಅಗ್ರಸೇನ್ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ಹೊರಹಾಕಿದೆ. ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಎಸ್‍ವೈ, ಈಶ್ವರಪ್ಪ, ಹಿಮಂತ್ ಬಿಸ್ವಾಸ್ ಶರ್ಮಾ, ನಾರಾಯಣ ರಾಣೆ ವಿರುದ್ಧ ಹಲವು ಆರೋಪ ಇದ್ದರೂ ತನಿಖಾ ಸಂಸ್ಥೆಗಳು ಸುಮ್ಮನಿವೆ. ಕಾಂಗ್ರೆಸ್ ನಾಯಕರನ್ನು ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *