‘ಫಾರೆಸ್ಟ್’ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌

Public TV
1 Min Read

ಸ್ಯಾಂಡಲ್‌ವುಡ್ (Sandalwood) ‘ಉಪಾಧ್ಯಕ್ಷ’ ಚಿಕ್ಕಣ್ಣ (Chikkanna) ಸ್ನೇಹಿತರ ಜೊತೆಗೂಡಿ ಕಾಡಿನ ಕತೆ ಹೇಳೋಕೆ ರೆಡಿ ಆಗಿದ್ದಾರೆ. ಶೇಕಡ 80ರಷ್ಟು ಸಿನಿಮಾ ಕಾಡಿನಲ್ಲಿಯೇ ಸಾಗುತ್ತದೆ. ಹಾಗಾಗಿ ಚಿತ್ರಕ್ಕೆ ‘ಫಾರೆಸ್ಟ್’ ಅಂತಲೇ ಹೆಸರಿಡಲಾಗಿದೆ. ಈ ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ. ಇದನ್ನೂ ಓದಿ:ದರ್ಶನ್ ಪ್ರಕರಣದ ಕುರಿತು ನಟಿ ಮಯೂರಿ ರಿಯಾಕ್ಷನ್

‘ಓಡೋ ಓಡೋ’ ಅಂತಾ ಶುರುವಾಗುವ ಹಾಡಿಗೆ ಪುನೀತ್ ಆರ್ಯ ಕ್ಯಾಚಿ ಆಗಿ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಕೈಲಾಸ್ ಖೇರ್, ಹರ್ಷ ಉಪ್ಪಾರ್ ಧ್ವನಿಯಾಗಿದ್ದಾರೆ. ಧರ್ಮವೀರ್ ಈ ಹಾಡಿಗೆ ಸಂಗೀತ ಒದಗಿಸಿದ್ದಾರೆ. ಓಡೋ ಓಡೋ ಹಾಡಿನಲ್ಲಿ ಚಿಕ್ಕಣ್ಣ ರಂಗಾಯಣ ರಘು, ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್, ಅನೀಶ್ ತೇಜೇಶ್ವರ್ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ‘ಡಬಲ್ ಇಂಜಿನ್’, ‘ಬಾಂಬೆ ಮಿಠಾಯಿ’, ‘ಬ್ರಹ್ಮಚಾರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾವಾಗಿದ್ದು, ಹಿರಿಯ ನಟ ಅವಿನಾಶ್, ಪ್ರಕಾಶ್ ತುಮ್ಮಿನಾಡ್, ಶರಣ್ಯ ಶೆಟ್ಟಿ (Sharany Shetty), ಅರ್ಚನಾ ಕೊಟ್ಟಿಗೆ (Archana Kottige), ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಸುನಿಲ್ ಕುಮಾರ್ ತಾರಾಬಳಗದಲ್ಲಿದ್ದಾರೆ.

‘ಫಾರೆಸ್ಟ್’ (Forest Film) ಸಿನಿಮಾಗೆ ಎನ್ ಎಂ ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕಾಂತರಾಜು ಎಂಬುವವರು ಹಣ ಹಾಕುತ್ತಿದ್ದಾರೆ. ಚಿತ್ರಕ್ಕೆ ವಿ ರವಿಕುಮಾರ್ ಛಾಯಾಗ್ರಹಣ ಮಾಡುತ್ತಿದ್ದು, ಸಂಕಲನದ ಹೊಣೆಯನ್ನು ಅರ್ಜುನ್ ಕಿಟ್ಟು ಹೊತ್ತುಕೊಂಡಿದ್ದಾರೆ. ಧರ್ಮವೀರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿರುವ ಚಿತ್ರತಂಡ, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

Share This Article