ಕರ್ತವ್ಯದ ವೇಳೆ ಅರಣ್ಯ ಇಲಾಖೆ ನೌಕರ ಬ್ರೈನ್‍ಸ್ಟ್ರೋಕ್‍ಗೆ ಬಲಿ

Public TV
1 Min Read

ಚಾಮರಾಜನಗರ: ಬ್ರೈನ್‍ಸ್ಟ್ರೋಕ್‍ನಿಂದ (Brain Stroke) ಅರಣ್ಯ ಇಲಾಖೆ (Forest Department) ಹೊರಗುತ್ತಿಗೆ ನೌಕರ ಸಾವನ್ನಪ್ಪಿದ ಘಟನೆ ಬಂಡೀಪುರದ ಮದ್ದೂರು ವಲಯದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಗೋಪಾಲಪುರದ ಮಹೇಶ್ ಎಂದು ಗುರುತಿಸಲಾಗಿದೆ. ಅವರು ಕಳೆದ 28 ವರ್ಷಗಳಿಂದ ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದರು. ಮದ್ದೂರು ಕಳ್ಳಬೇಟೆ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬ್ರೈನ್‍ಸ್ಟ್ರೋಕ್ ಆಗಿದೆ. ತಕ್ಷಣ ಅವರನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮೃತ ನೌಕರನ ಕುಟುಂಬಕ್ಕೆ ಅರಣ್ಯ ಇಲಾಖೆ ನಿಯಮಾನುಸಾರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಮದ್ದೂರು ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಮೃತನ ಕುಟುಂಬಸ್ಥರು ಕೆಲ ಕಾಲ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

Share This Article