ಸಾರಸ್ ಕೊಕ್ಕರೆಯನ್ನು ಸಾಕಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್

Public TV
1 Min Read

ಲಕ್ನೋ: ಸಾರಸ್ ಕೊಕ್ಕರೆಯನ್ನು ರಕ್ಷಣೆ ಮಾಡಿ ಒಂದು ವರ್ಷಗಳ ಕಾಲ ಸಾಕಿದ್ದ ಉತ್ತರ ಪ್ರದೇಶದ (Uttar Pradesh) ವ್ಯಕ್ತಿಯೊಬ್ಬನಿಗೆ ಅರಣ್ಯ ಇಲಾಖೆ (Forest department) ನೋಟಿಸ್ ಜಾರಿಗೊಳಿಸಿದೆ.

ಅಮೇಥಿ ಜಿಲ್ಲೆಯ ಮಂಡ್ಖಾ ಗ್ರಾಮದ ಆರೀಫ್ ಖಾನ್ ಗುರ್ಜರ್ ಅವರು ತಮ್ಮ ಹೊಲದಲ್ಲಿ ಸಿಕ್ಕಿದ್ದ ಕೊಕ್ಕರೆಯನ್ನು ಮನೆಗೆ ಕೊಂಡೊಯ್ದು ಸಾಕಿದ್ದರು. ಈಗ ಅರಣ್ಯ ಇಲಾಖೆ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ (Wildlife Protection Act)ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬಾಲಕಿ ಹತ್ಯೆಗೈದ ಅಪರಾಧಿಗೆ ನೂರು ವರ್ಷ ಜೈಲು

ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಷಿಯನ್ನು ಸಮಸ್ಪುರ್‍ನ ಅಭಯಾರಣ್ಯಕ್ಕೆ ಸ್ಥಳಾಂತರಿಸಿದ್ದು, ನೈಸರ್ಗಿಕವಾಗಿ ವಾಸಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ (Samajwadi Party) ಅಕಿಲೇಶ್ ಯಾದವ್ (Akhilesh Yadav), ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ. ಇಲಾಖೆಗೆ ಪ್ರಧಾನಿ ನಿವಾಸದ ನವಿಲನ್ನು ಕೊಂಡೊಯ್ಯುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಸಾರಸ್ ಹಾಗೂ ಆರೀಫ್‍ನ ಒಡನಾಟದ ಬಗ್ಗೆ ಕೇಳಿದ್ದ ಅಖಿಲೇಶ್ ಯಾದವ್, ರೈತನನ್ನು ಭೇಟಿಯಾಗಿ ಕೊಕ್ಕರೆಯೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಯಾದವ್ ಹೇಳಿಕೆಗೆ ಅರಣ್ಯಾಧಿಕಾರಿ ಡಿ.ಎನ್ ಸಿಂಗ್ ಪ್ರತಿಕ್ರಿಯಿಸಿ, ಆರೀಫ್ ಒಪ್ಪಿಗೆಯೊಂದಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಪಕ್ಷಿಗಳು ಯಾವಾಗಲೂ ಜೋಡಿಯಾಗಿ ಜೀವಿಸುತ್ತವೆ ಎಂದಿದ್ದಾರೆ. ಇದನ್ನೂ ಓದಿ: ದೇವಿ ಹೇಳಿದಂತೆ ಎರಡು ಕ್ಷೇತ್ರದಲ್ಲಿ ನಿಲ್ಲಲು ಮುಂದಾದ್ರಾ ಸಿದ್ದರಾಮಯ್ಯ?

Share This Article
Leave a Comment

Leave a Reply

Your email address will not be published. Required fields are marked *