ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್‌ಗಳಿಗೆ ಫಾರಿನ್ ಫಂಡ್ – ಪರಿಶೀಲನೆಗೆ ಮುಂದಾದ ಇ.ಡಿ

Public TV
1 Min Read

ಬೆಂಗಳೂರು/ಮಂಗಳೂರು: ಧರ್ಮಸ್ಥಳ ವಿಷಯದಲ್ಲಿ (Dharmasthala Case) ಅಪಪ್ರಚಾರ ಮಾಡಲು ಯೂಟ್ಯೂಬರ್‌ಗಳಿಗೆ (YouTubers) ವಿದೇಶದಿಂದ ಹಣ (Foreign Fund) ಹರಿದುಬಂದಿದೆ ಅನ್ನೋ ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ಕೇಂದ್ರ ಗೃಹ ಸಚಿವಾಲಯಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದಿರೋ ಬೆನ್ನಲ್ಲೇ ದಾಖಲೆಗಳ ಪರಿಶೀಲನೆ ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ಅಮಿತ್ ಶಾ (Amit Shah) ಸೂಚನೆ ಕೊಟ್ಟಿದ್ದಾರೆ. ಹೀಗಾಗಿ, ಬೆಂಗಳೂರಿನ ಇ.ಡಿ (ED) ಅಧಿಕಾರಿಗಳು ಈಗ ಯೂಟ್ಯೂಬರ್‌ಗಳ ಆದಾಯದ ಮೂಲ ಕೆದಕುತ್ತಿದ್ದಾರೆ.

ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿ, ದೇವಸ್ಥಾನದ ಪಾವಿತ್ರ್ಯತೆ ಉಳಿಸುವ ಸಲುವಾಗಿ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾವುದೇ ವ್ಯಕ್ತಿಗತವಾಗಿ ನಾನು ಪತ್ರ ಬರೆದಿಲ್ಲ ಅಂದಿದ್ದಾರೆ. ಇನ್ನು, ಶಾಸಕ ಭರತ್ ಶೆಟ್ಟಿ ಮಾತಾಡಿ, ಎನ್‌ಐಎ ಅಥವಾ ಇಡಿ ತನಿಖೆಯಾದ್ರೆ ಯಾರೆಲ್ಲರ ಬ್ಯಾಂಕ್ ಖಾತೆಗಳಿಗೆ ಎಷ್ಟೆಲ್ಲ ಹಣ ಎಲ್ಲೆಲ್ಲಿಂದ ಬಂದಿದೆ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಹಾಗೂ ಯೂಟ್ಯೂಬರ್ ಸಮೀರ್ ವಿರುದ್ಧ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಎಸ್‌ಪಿಗೆ ದೂರು ಕೊಟ್ಟಿದ್ದಾರೆ. ಇನ್ನೊಂದೆಡೆ ಭಜರಂಗದಳ ಕಾರ್ಯಕರ್ತ ತೇಜಸ್ ಗೌಡ ಕೂಡ ಡಿಜಿ ಕಚೇರಿಯಲ್ಲಿ ಸಮೀರ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಹಣ ಹಂಚಿಕೆ ಆರೋಪ – ಕಾಂಗ್ರೆಸ್ ನಾಯಕರ ವಿರುದ್ಧ ಆಯೋಗಕ್ಕೆ ದೇವರಾಜೇಗೌಡ ದೂರು

Share This Article