ರಾಜ್ಯದಲ್ಲೇ ಮೊದಲ ಬಾರಿಗೆ ಬೀದರ್‌ನಲ್ಲಿ 15.50 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ!

Public TV
1 Min Read

ಬೀದರ್: ರಾಜ್ಯದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಎನ್‌ಸಿಬಿ (NCB) ಹಾಗೂ ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಬರೋಬ್ಬರಿ 15.50 ಕೋಟಿ ರೂ. ಮೌಲ್ಯದ 1,596 ಕೆಜಿ ಗಾಂಜಾ (Cannabis) ಜಪ್ತಿ ಮಾಡಿದ್ದಾರೆ.

ಲಾರಿಯಲ್ಲಿ ಅಕ್ರಮವಾಗಿ ಆಂಧ್ರಪ್ರದೇಶದಿಂದ (Andhra Pradesh) ಬೀದರ್ (Bidar) ಮುಖಾಂತರ ಮಹಾರಾಷ್ಟ್ರಕ್ಕೆ (Maharashtra) ಸಾಗಿಸುತ್ತಿದ್ದ 1,596 ಕೆ.ಜಿ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಳ್ಳಿ ಚೆಕ್‌ಪೋಸ್ಟ್ ಬಳಿ ಎನ್‌ಸಿಬಿ ಹಾಗೂ ಬೀದರ್ ಪೊಲೀಸರು ದಾಳಿ ಮಾಡಿ ಭರ್ಜರಿ ಬೇಟೆಯಾಡಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ – ಕಾರ್ಮಿಕರ ಕಾಲೋನಿ ಮನೆಗಳಿಗೆ ಬೆಂಕಿ

ದಾಳಿ ವೇಳೆ 1,596 ಕೆ.ಜಿಯ ಅಕ್ರಮ ಗಾಂಜಾ ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಡ್ರೈವರ್, ಕ್ಲೀನರ್‌ನನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ ಎನ್‌ಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ಕಲಬುರಗಿಯಲ್ಲೇ ಬೀಡುಬಿಟ್ಟಿರೋ NIA

Share This Article