ಕರ್ನಾಟಕದಲ್ಲಿ ಶಾಂತಿ ದೃಷ್ಟಿಯಿಂದ ಬುಲ್ಡೋಜರ್ ಕ್ರಮ ಅವಶ್ಯ: ಮುತಾಲಿಕ್

Public TV
1 Min Read

ಚಿಕ್ಕೋಡಿ: ಕರ್ನಾಟಕದಲ್ಲಿ ಶಾಂತಿ ದೃಷ್ಟಿಯಿಂದ ಬುಲ್ಡೋಜರ್ ಕ್ರಮ ಅವಶ್ಯಕವಾಗಿ ಬೇಕಾಗಿದೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿಗೆ ಹೇಳಿಕೆ ಕೊಟ್ಟ ಅವರು, ಬುಲ್ಡೋಜರ್ ಬಳಕೆ ಮಾಡಿದ್ರೆ ನಮ್ಮ ಮನೆ ಅಂಗಡಿ ಹೋಗುತ್ತದೆ ಎನ್ನುವ ಭಯ ಬರಬೇಕು. ಉತ್ತರ ಪ್ರದೇಶದಲ್ಲಿ ಈ ಅಸ್ತ್ರ ಪ್ರಯೋಗವಾಗಿದೆ. ಕರ್ನಾಟಕದಲ್ಲಿ ಯಾಕೆ ಮಾಡಬಾರದು? ಮುಸ್ಲಿಮರು ಇರುವ ವಾನಿಪ್ಲಾಟ್ ಮೇಲೆ ಬುಲ್ಡೋಜರ್ ಹಾಕಬೇಕು. ಸರ್ಕಾರದ ಮೇಲೆ ಕಾನೂನುಕ್ರಮ ಆದರೆ ಆಗಲಿ. ಗಲಭೆಕೋರರ ಮನೆ ಮೇಲೆ ಬುಲ್ಡೋಜರ್ ಹಾಕಿ ಮನೆ ಕಿತ್ತು ಬಿಸಾಕಬೇಕು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಯೂನಿಫಾರ್ಮ್‌ ಹಾಕ್ಕೊಂಡು ಬಿಲ್ಡಪ್‌

ಲೌಡ್ ಸ್ಪೀಕರ್ ಹೋರಾಟದ ಕುರಿತು ಮಾತನಾಡಿದ ಅವರು, ಶ್ರೀರಾಮಸೇನಾ ಹೋರಾಟದಿಂದ ನಿದ್ದೆ ಮಾಡುವ ನಿರ್ಲಕ್ಷ್ಯ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ಲೌಡ್ ಸ್ಪೀಕರ್‌ನಲ್ಲಿ ಕೂಗುವುದಕ್ಕೆ ಸಾಕ್ಷಿ ಕೊಡುತ್ತೇವೆ. ಎಫ್‍ಐಆರ್ ದಾಖಲು ಮಾಡುವ ಜೊತೆಗೆ ಮಸೀದಿಯನ್ನು ಸೀಜ್ ಮಾಡಿ. ಒಂದು ವೇಳೆ ಅದನ್ನು ನಿಲ್ಲಸದೇ ಇದ್ದಲ್ಲಿ, ಮೇ 9ನೇ ತಾರೀಖು ಎಲ್ಲ ದೇವಸ್ಥಾನಗಳಲ್ಲಿ 5 ಗಂಟೆಗೆ ಮೈಕ್ ಹಾಕಿ ಭಜನೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಶ್ರೀರಾಮ ಸೇನೆಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಕುಖ್ಯಾತರಾಗಬೇಡಿ: ಕಟೀಲ್ ವಿರುದ್ಧ ಮುತಾಲಿಕ್ ಕಿಡಿ

loudspeakers

ಲವ್ ಕೇಸರಿ ಕ್ರಿಯೆಗೆ ಪ್ರತಿಕ್ರಿಯೆ ನೀಡಿದಂತಾಗುತ್ತದೆ. ರಾಜ್ಯದಲ್ಲಿ ಲವ್ ಕೇಸರಿ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಲವ್ ಜಿಹಾದ್‍ನಿಂದ ಹಿಂದೂ ಹುಡುಗಿಯರು ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *