ಐದು ಗ್ಯಾರಂಟಿ ಜಾರಿಗೆ ಅಬಕಾರಿ ಇಲಾಖೆಗೆ ಬಿಗ್‌ ಟಾರ್ಗೆಟ್‌!

Public TV
1 Min Read

ಬೆಂಗಳೂರು: ಐದು ಗ್ಯಾರಂಟಿಗಳನ್ನು (Congress Guarantee) ಜಾರಿ ಮಾಡುವುದಾಗಿ ಘೋಷಿರುವ ಸಿದ್ದರಾಮಯ್ಯ (Siddaramaiah) ಸರ್ಕಾರ ಈಗ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಲು ಪ್ರಯತ್ನ ಮಾಡುತ್ತಿದ್ದು, ಅಬಕಾರಿ ಇಲಾಖೆಗೆ (Excise Department) ಈ ಬಾರಿ ಬಿಗ್ ಟಾರ್ಗೆಟ್ ನೀಡಲು ಸರ್ಕಾರ ಮುಂದಾಗಿದೆ.

ಈ ಹಣಕಾಸು ವರ್ಷದಲ್ಲಿ 40 ಸಾವಿರ ಕೋಟಿ ರೂ.ಆದಾಯ ಸಂಗ್ರಹದ ಟಾರ್ಗೆಟ್ ನೀಡಲು ಸಿದ್ದತೆ ನಡೆಸಿದೆ. ಬಿಜೆಪಿ (BJP) ಸರ್ಕಾರ ಮಂಡಿಸಿದ ಬಜೆಟ್‍ನಲ್ಲಿ ಅಬಕಾರಿ ಇಲಾಖೆಯಿಂದ 35 ಸಾವಿರ ಕೋಟಿ ಗುರಿ ನೀಡಲಾಗಿತ್ತು.

 

ಇದೇ ವೇಳೆ ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಮಾಡುವ ಸುಳಿವನ್ನು ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ (Krishna Byre Gowda)ನೀಡಿದ್ದಾರೆ. ಶೀಘ್ರವೇ ಆಸ್ತಿ ಮಾರ್ಗಸೂಚಿ ದರ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್‌ – ವಿಶ್ವದಾಖಲೆ ಬರೆದ ಇಂಡಿಗೋ

2018 ರಿಂದ ಕರ್ನಾಟಕದಲ್ಲಿ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಿಲ್ಲ. ಇದರಿಂದ ರೈತರಿಗೂ, ಮಾರಾಟಗಾರರಿಗೂ ಅನ್ಯಾಯ ಆಗುತ್ತಿದೆ. ಶೀಘ್ರವೇ ಮಾರುಕಟ್ಟೆ ದರಕ್ಕೆ ತಕ್ಕಂತೆ ಮಾರ್ಗಸೂಚಿ ದರ ಬದಲಾವಣೆ ಮಾಡುತ್ತೇವೆ ಎಂದಿದ್ದಾರೆ.

ಆದಾಯ ಸಂಗ್ರಹದ ಟಾರ್ಗೆಟ್‌ ಯಾವ ಇಲಾಖೆಗೆ ಎಷ್ಟು ಎನ್ನುವುದು ಜುಲೈನಲ್ಲಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ತಿಳಿಯಲಿದೆ.

ಚುನಾವಣಾ ಪ್ರಚಾರದಲ್ಲಿ ಈ ಯೋಜನೆಗಳಿಗೆ ಹಣವನ್ನು ಹೇಗೆ ಹೊಂದಿಸಲಾಗುತ್ತದೆ ಎಂದು ಕೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ 40% ಕಮಿಷನ್ ಹಣವನ್ನು ಇದಕ್ಕೆ ವಿನಿಯೋಗಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

Share This Article