ಮಾಜಿ ಫುಟ್ಬಾಲ್ ಆಟಗಾರ ಸುಭಾಷ್ ಭೌಮಿಕ್ ನಿಧನ

Public TV
1 Min Read

ಕೊಲ್ಕತ್ತಾ: ಲೆಜೆಂಡರಿ ಮಾಜಿ ಫುಟ್ಬಾಲ್ ಆಟಗಾರ ಮತ್ತು ಮಾಜಿ ಕೋಚ್ ಸುಭಾಷ್ ಭೌಮಿಕ್ (72) ಅವರು ಶನಿವಾರ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಮೂರೂವರೆ ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. 1970ರ ಏಷ್ಯನ್ ಗೇಮ್ಸ್‍ನಲ್ಲಿ ಭಾರತದ ಫುಟ್ಬಾಲ್ ತಂಡದಲ್ಲಿ ಆಟಗಾರರಾಗಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದಿತ್ತು.

ಭೌಮಿಕ್ ಅವರು ಮೊಹಮ್ಮದನ್ ಸ್ಪೋರ್ಟಿಂಗ್, ಸಲ್ಗೋಕರ್, ಈಸ್ಟ್ ಬೆಂಗಾಲ್ ಸೇರಿದಂತೆ ಹಲವಾರು ದೊಡ್ಡ ಕ್ಲಬ್‍ಗಳಿಗೆ ಸ್ಟ್ರೈಕರ್ ಮತ್ತು ಆಟಗಾರರಾಗಿ ಆಡಿದ್ದರು. ಭೌಮಿಕ್ 1979ರಲ್ಲಿ ತಮ್ಮ ಆಟದ ವೃತ್ತಿ ಜೀವನದಿಂದ ನಿವೃತ್ತಿಗೊಂಡು, ತರಬೇತಿ ನೀಡಲು ಪ್ರಾರಂಭಿಸಿದ್ದರು. 2003ರಲ್ಲಿ ಪೂರ್ವ ಬಂಗಾಳದ ಎಎಸ್‍ಇಎಎನ್ ಪ್ರಶಸ್ತಿ ಹಾಗೂ ರಾಷ್ಟ್ರೀಯ ಲೀಗ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಭೌಮಿಕ್ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ನಂತರ ಕೋಲ್ಕತ್ತಾದ ಎಕ್ಬಲ್‍ಪುರದ ನಸಿರ್ಂಗ್ ಹೋಮ್‍ಗೆ ದಾಖಲಾಗಿದ್ದರು. ಇಂದು ನಿಧನರಾಗಿದ್ದಾರೆ.  ಇದನ್ನೂ ಓದಿ: ವಿಮಾನ ಪ್ರಯಾಣಿಕರು ಇನ್ಮುಂದೆ ಒಬ್ಬರು ಒಂದೇ ಹ್ಯಾಂಡ್ ಬ್ಯಾಗ್ ಒಯ್ಯಬೇಕು!

ಈ ಬಗ್ಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‍ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಮಾತನಾಡಿ, ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಭೌಮಿಕ್ ಇನ್ನಿಲ್ಲ ಎಂದು ಕೇಳಲು ದುಃಖವಾಗಿದೆ. ಭಾರತೀಯ ಫುಟ್ಬಾಲ್‍ಗೆ ಅವರ ಅಮೂಲ್ಯ ಕೊಡುಗೆ ಯಾವಾಗಲೂ ನಮ್ಮೊಂದಿಗೆ ಇರುತ್ತದೆ ಮತ್ತು ಎಂದಿಗೂ ಮರೆಯಲಾಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಿಲ್ಲ: ಗಂಗೂಲಿ

Share This Article
Leave a Comment

Leave a Reply

Your email address will not be published. Required fields are marked *