ಶ್ರೀಲಂಕಾ ಆರ್ಥಿಕ ಸ್ಥಿತಿ ಗಂಭೀರ – ದಿನ ಬಳಕೆ ವಸ್ತುಗಳ ಬೆಲೆ ಎಷ್ಟು?

Public TV
1 Min Read

ಕೊಲೊಂಬೋ: ಆರ್ಥಿಕತೆ ಕುಸಿತವು ಜನಸಾಮಾನ್ಯರು ನಿತ್ಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.

ಬೆಲೆ ಏರಿಕೆಯಾದ ವಸ್ತುಗಳ ಪಟ್ಟಿ ಶ್ರೀಲಂಕಾ ರುಪಿಯಲ್ಲಿ: ದಿನಬಳಕೆ ವಸ್ತುಗಳಾದ ಅಕ್ಕಿ, ಹಾಲಿನಪುಡಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಧಿಡೀರ್ ಏರಿಕೆಯಾಗಿದೆ. 400 ಗ್ರಾಂ ಹಾಲಿನಪುಡಿಯ ಬೆಲೆ 790 ರುಪಿಗೆ (ರುಪಿ ಶ್ರೀಲಂಕಾದ ಕರೆನ್ಸಿ ಹೆಸರು) ತಲುಪಿದ್ದರೆ, 1 ಕೇಜಿ ಅಕ್ಕಿಯ ಬೆಲೆ 290 ಲಂಕಾ ರುಪಿ., ಟೀ 1ಕಪ್‍ಗೆ 100 ರುಪಿ., ಗೋಧಿ ಹಿಟ್ಟು 160 ರುಪಿ., ಕಾಳುಗಳು 270 ರುಪಿ., ಪೆಟ್ರೋಲ್ 283 ರುಪಿ, ಡಿಸೇಲ್ 254 ರುಪಿ., ಎಲ್‍ಪಿಜಿ 2000 ರುಪಿ., ನಷ್ಟಾಗಿದೆ.

ಭಾರತ, ಚೀನಾ ಸೇರಿದಂತೆ ಕೆಲ ದೇಶಗಳು ಶ್ರೀಲಂಕಾಕ್ಕೆ ಈ ಸಮಸ್ಯೆಯಿಂದ ಹೊರಬರಲು ನೆರವು ಮತ್ತು ಸಾಲದ ಸೌಲಭ್ಯ ಒದಗಿಸಿದೆ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕವಿದೆ. ಪೇಪರ್ ದೊರೆಯದೆ ಶಾಲೆಗಳು ಪರೀಕ್ಷೆ ನಡೆಯುತ್ತಿಲ್ಲ. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ

ಕೊರೊನಾ ಹೊಡೆತ : ಪ್ರವಾಸೋದ್ಯಮ ಮುಖ್ಯ ಆದಾಯವಾಗಿದೆ. ಆದರೆ ಕೊರೊನಾದಿಂದಾಗಿ ಕಳೆದ ಮೂರು ವರ್ಷಗಳಿಂದ ಈ ಉದ್ಯಮ ಪೂರ್ಣ ನೆಲಕಚ್ಚಿದೆ. ಬಹುತೇಕ ವಸ್ತುಗಳಿಗೆ ವಿದೇಶವನ್ನು ಶ್ರೀಲಂಕಾ ಅವಲಂಬಿಸಿದೆ. ಆದರೆ ವಿದೇಶಗಳಿಂದ ಅಗತ್ಯ ವಸ್ತುಗಳ ಖರೀದಿಗೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದೇಶಗಳಿಗೆ ವಲಸೆ: ಲಂಕಾದಲ್ಲಿ ಬದುಕು ದುಸ್ತುರವಾದ ಬೆನ್ನಲ್ಲೇ, ಅಲ್ಲಿನ ತಮಿಳು ಕುಟುಂಬಗಳು ಬೋಟ್ ಮಾಲೀಕರಿಗೆ 50000 ರೂ.ವರೆಗೂ ಹಣ ಕೊಟ್ಟು ಭಾರತಕ್ಕೆ ವಲಸೆ ಬರುತ್ತಿದ್ದಾರೆ.

ಡಾಲರ್ ಎದುರು ಲಂಕಾ ರುಪಿ ಮೌಲ್ಯ ಕುಸಿದಿರುವುದರಿಂದ ವಿದೇಶಿ ವಿನಿಮಯದಿಂದ ಶ್ರೀಲಂಕಾ ಹೆಚ್ಚಿನ ನಷ್ಟ ಅನುಭವಿಸುತ್ತಿದೆ. ಕಳೆದ ಫೆಬ್ರವರಿಯಲ್ಲಿ ಶ್ರೀಲಂಕಾದ ಹಣದುಬ್ಬರ ಶೇ.15.1ಕ್ಕೆ ಏರಿಕೆಯಾಗಿತ್ತು. ಇಡೀ ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಪ್ರಮಾಣದ ಹಣದುಬ್ಬರವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *